
ವೇಮಗಲ್: ಕೋಲಾರ ತಾಲೂಕು ವೇಮಗಲ್ ಹೋಬಳಿ ಕ್ಯಾಲನೂರು ಗ್ರಾಮದಲ್ಲಿ ಮಾಜಿ ಸಚಿವರಾದ ವರ್ತೂರ್ ಪ್ರಕಾಶ್ ವಿ ಆರ್ ಪಿ ಕ್ರಿಕೆಟ್ ಪಂದ್ಯಾವಳಿ ಟ್ರೋಫಿ ಗೆಲುವು ಸಾಧಿಸಿದ ತಂಡಕ್ಕೆ ನಗದು ಬಹುಮಾನ ನೀಡಿ ಮಾತನಾಡಿದವರು ವಿಶ್ವದಲ್ಲಿಯೇ ಕ್ರಿಕೆಟ್ ಶ್ರೀಮಂತ ಆಟ ಎಂಬ ಹೆಗ್ಗಳಿಕೆ ಹೆಸರು ಪಡೆದಿದೆ ನಮ್ಮ ರಾಜ್ಯದಿಂದ ಗೋಡೆ ಎಂದು ಹೆಸರು ಪಡೆದ ಭಾರತ ದೇಶದ ಮಾಜಿ ನಾಯಕರು ವಿಶ್ವ ಕಪ್ ಗೆಲುವು ತಂದುಕೊಟ್ಟ ರಾಹುಲ್ ದ್ರಾವಿಡ್ ತರಹ ನಮ್ಮ ಕೋಲಾರ ತಾಲೂಕಿನ ಯುವಕರು ಬೆಳೆಯಬೇಕು ಇತ್ತೀಚಿಗಷ್ಟೇ ನಮ್ಮ ಬೆಂಗಳೂರಿನ ಕೆ ಎಲ್ ರಾಹುಲ್ ಸಹ ರಾಷ್ಟ್ರೀಯ ಆಟಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಇವರು ಹಾಡುವ ತರಹ ಯುವಕರು ಆಡಬೇಕು.
ಕೇವಲ ಆಟವೇ ಮುಖ್ಯವಾಗಬಾರದು ತಮ್ಮ ತಂದೆ ತಾಯಿಗಳನ್ನ ಪ್ರೀತಿಯಿಂದ ಪ್ರೀತಿಸಿದರೆ ದೇವಲೋಕದಿಂದ ದೇವರು ನಿಮಗೆ ಆಶೀರ್ವಾದ ಮಾಡುತ್ತಾರೆ ತಂದೆ ತಾಯಿಯನ್ನ ಯಾರು ಹೃದಯದಿಂದ ಪ್ರೀತಿಸುತ್ತಾರೋ ಅವರು ಎಲ್ಲಾ ವಿಭಾಗಗಳಲ್ಲೂ ಜಯಶೀಲರಾಗುತ್ತಾರೆ ಎಂದು ಯುವಕರಿಗೆ ಕಿವಿಮಾತು ಹೇಳಿದರು
ಮೊದಲ ಬಹುಮಾನ ಒಂದು ಲಕ್ಷ ಎರಡನೇ ಬಹುಮಾನ ಐವತ್ತು ಸಾವಿರ ಗಳು ಮೂರನೇ ಬಹುಮಾನ ೨೫,೦೦೦ ಗಳು ಉತ್ತಮ ಪ್ರದರ್ಶನ ತೋರಿದ ತಂಡಗಳಿಗೆ ಸಮಾಧಾನ ಬಹುಮಾನಗಳನ್ನ ವಿತರಿಸಿದರು ಈ ಸಂದರ್ಭದಲ್ಲಿ ಕ್ಯಾಲನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಕೋಡಿ ಕಣ್ಣೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಾಬು, ಕ್ಯಾಲನೂರು ಯುವ ಮುಖಂಡರಾದ ಡೈರು ಬಾಬು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್, ಹಾಗೂ ವೇಮಗಲ್ ಹೋಬಳಿ ಕ್ರೀಡಾಪಟುಗಳು ಭಾಗವಹಿಸಿದ್ದರು
























