
ವಿಜಯಪುರ : ಅಭಿವೃದ್ಧಿಯ ಮೂಲಕ ಗ್ರಾಮೀಣ ಭಾಗದ ರಸ್ತೆಗಳಿಗೆ ಹೊಸ ಮೆರಗು ನೀಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೩೦೦ ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೩೪ರ ಯಕ್ಕುಂಡಿ, ಸಂಗಾಪುರ, ಶೇಗುಣಸಿ, ಕಾಖಂಡಕಿ ವ್ಹಾಯಾ ಹರಳಯ್ಯನಗುಂಡ ೦ ಕಿ. ಮೀ. ಯಿಂದ ೩ ಕಿ. ಮೀ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನತೆಯ ಬಹುದಿನಗಳ ನಿರೀಕ್ಷೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ ೩೪ರಿಂದ ಹರಳಯ್ಯನಗುಂಡ ರಸ್ತೆಯವರೆಗೆ ಈ ಕಾಮಗಾರಿ ನಡೆಯಲಿದೆ. ಇದರಿಂದ ಯಕ್ಕುಂಡಿ, ಸಂಗಾಪುರ, ಶೇಗುಣಸಿ ಹಾಗೂ ಕಾಖಂಡಕಿ ಜನರಿಗೆ ಹಾಗೂ ಸುಕ್ಷೇತ್ರ ಹರಳಯ್ಯನಗುಂಡಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲ, ಈ ಕಾಮಗಾರಿ ಪೂರ್ಣಗೊಂಡ ನಂತರ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರಸ್ತೆ ಸಂಚಾರ ಮತ್ತಷ್ಡು ಸುಲಭವಾಗಲಿದೆ ಎಂದು ಅವರು ತಿಳಿಸಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಪೂರಕವಾಗಿ ಈಗ ಹಳ್ಳಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮತಕ್ಷೇತ್ರದಲ್ಲಿ, ನೀರಾವರಿಗೆ ಪೂರಕವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತು ನೀಡಲಾಗಿದೆ. ಶೈಕ್ಷಣಿಗ ಗುಣಮಟ್ಟ ಸುಧಾರಣೆ, ರಸ್ತೆಗಳ ಅಭಿವೃದ್ಧಿ, ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ನಾನಾ ಯೋಜನೆಗಳಿವೆ ಚಾಲನೆ ನೀಡಲಾಗಿದೆ. ರೈತರು ಖುಷಿಯಾಗಿದ್ದರೆ ನಾಡು ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ತತ್ವದಡಿ ಕಾಯಕ ನಿರತರಾಗಿರುವುದಾಗಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದರಿಂದ ಈ ಭಾಗದ ಜನರು ಸುತ್ತುಬಳಸಿ ಬೇರೆ ಮಾರ್ಗಗಳ ಮೂಲ ಸಂಚಿರಿಸುವುದು ತಪ್ಪಲಿದೆ. ಸಮಯ ಉಳಿತಾಯದ ಜೊತೆ ವಾಹನಗಳ ತೈಲ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಕ್ಕುಂಡಿಯ ವೀರೇಶ್ವರ ಶರಣರು, ಮುಖಂಡರಾದ ವಿ. ಎಸ್. ಪಾಟೀಲ, ಮಲ್ಲು ದಳವಾಯಿ, ರಮೇಶ ದೇಸಾಯಿ, ಬಾಬುಗೌಡ ಪಾಟೀಲ, ನಾಗರಾಜ ಕುಲಕರ್ಣಿ, ಪ್ರಭುಗೌಡ ಪಾಟೀಲ, ಶೇಖಪ್ಪ ಕೊಪ್ಪದ, ಮಲ್ಲಪ್ಪ ಕೆಂಪವಾಡ, ಮಹೇಶ ಮಾಳಿ, ರಫೀಕ್ ಸೋನಾರ, ಜಾಫರ್ ನಿಡೋಣಿ, ವಿದ್ಯಾ ರಾಣಿ ತುಂಗಳ, ದಾನಮ್ಮ ಜಿರಲಿ, ಕಾವ್ಯ ಪಡತಾರೆ, ರಂಗಪ್ಪ ಪೂಜಾರಿ, ಮಾದೇವಪ್ಪ ಮಂಡೆಗಾರ, ಬುಡ್ಡಸಾಬ್ ಜಮಾದಾರ, ಇಸಾಕಸಾಬ್ ಜಮಾದಾರ, ಮುತ್ತಪ್ಪ ಪೂಜಾರಿ, ರಾಜಸಾಬ ಜಮಾದಾರ, ಪರಶುರಾಮ ಪಡಗಾರ, ರಾಜೇಸಾಬ್ಲ ಗಲಗಲಿ, ಅಬ್ಬಾ ಸಲಿ ಕಮತೆ, ಸವಿತಾ ವಗ್ಗರ,ಸುರೇಶ ಪೂಜಾರಿ, ರಮೇಶ ತಂಬಾಕೆ ಸೇರಿದಂತೆ ಗ್ರಾಮದ ಹಿರಿಯರು, ಯುವಕರುಉಪಸ್ಥಿತರಿದ್ದರು.






















