
ಕೋಲಾರ,ಜೂ,೨೯- ಇಡೀ ರಾಷ್ಟ್ರದಲ್ಲೆ ನೀಟ್ ಪರೀಕ್ಷೆ ಸೋರಿಕೆ ಸದ್ದು ಜೋರಾಗಿದ್ದು ಇದೊಂದು ಖಂಡನೀಯ ಪ್ರಕರಣವಾಗಿದೆ. ಇದರ ನೈತಿಕ ಹೊಣೆಗಾರಿಕೆ ಹೊತ್ತಿರುವ ಕೇಂದ್ರ ಸರ್ಕಾರದ ಮಾನವ ಸಂಪನ್ಮೋಲ ಸಚಿವರಾದ ಧರ್ಮೇಂದ್ರ್ ಪ್ರಧಾನ್ ಅವರು ತಮ್ಮ ಬೇಜವಾಬ್ದಾರಿತನ ಹಿನ್ನೆಲೆಯಲ್ಲಿ ಕೊಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ ಬೇಕು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ವಿಧಾನ ಪರಿಷತ್ ಶಾಸಕ ಎಂ.ಎಲ್.ಅನಿಲ್ ಕುಮಾರ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಪ್ರಕರಣದಿಂದಾಗಿ ಹಲವಾರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಸಂಬಂಧವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಮನಹರಿಸಿ ಉತ್ತರಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಕರ್ನಾಟಕದಲ್ಲಿ ವೀರಪ್ಪ ಮೂಯಿಲಿ ಆಡಳಿತದಲ್ಲಿ ೧೯೮೪ರಲ್ಲಿ ವೈದ್ಯಕೀಯ, ಇಂಜನಿಯರಿಂಗ್ ಸೇರಿದಂತೆ ಉನ್ನತ ವೃತ್ತಿ ಪರ ಶಿಕ್ಷಣ ವ್ಯಾಸಂಗಗಳಿಗೆ ನೀಟ್ ಪರೀಕ್ಷೆಯನ್ನು ಜಾರಿಗೆ ತರಲಾಯಿತು. ರಾಜ್ಯದ ಆಯಾಯಾ ಕಾಲೇಜುಗಳಲ್ಲಿ ಪರೀಕ್ಷೆಯನ್ನು ಬರೆಯ ಬೇಕಾಗಿತ್ತು. ಆಯಾಯಾ ಶಿಕ್ಷಣ ಸಂಸ್ಥೆ ನಿಗಧಿ ಪಡೆಸಿದ ಶುಲ್ಕವನ್ನು ಪರೀಕ್ಷಾರ್ಥಿಗಳು ಪಾವತಿಸ ಬೇಕಾಗಿತ್ತು. ಈ ವ್ಯವಸ್ಥೆ ಬಡ ಸಾಮಾನ್ಯರ ವಿದ್ಯಾರ್ಥಿಗಳಿಗೆ ಕೈಗೆಟುಕದ ಗಗನ ಕುಸುಮವಾಗಿತ್ತು ಎಂದು ತಿಳಿಸಿದರು.
ಉನ್ನತ ಹುದ್ದೆಗಳ ಆಯ್ಕೆ ವ್ಯವಸ್ಥೆಯಲ್ಲಿ ಪಿ.ಯು.ಸಿ.ಯಲ್ಲಿ ಪಡೆದ ಅಂಕಗಳ ಶೇ೫೦ ರಷ್ಟು ಹಾಗೂ ನೀಟ್ ಪರೀಕ್ಷೆಯ ಶೇ ೫೦ ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಈ ವ್ಯವಸ್ಥೆಯು ೧೯೮೪ ರಿಂದ ೨೦೧೬ರವರೆಗೆ ಇದು ನಡೆದು ಬಂದ ಹಾದಿಯಾಗಿತ್ತು. ಕಳೆದ ೨೦೧೩ರಲ್ಲಿ ಕೇಂದ್ರ ಸರ್ಕಾರವು ನೀಟ್ ಪರೀಕ್ಷೆಯನ್ನು ರಾಷ್ಟ್ರಮಟ್ಟದಲ್ಲೇ ನಡೆಸಲು ಜಾರಿಗೆ ತರಲು ತೀರ್ಮಾನಿಸಿ ೨೦೧೬ ರಿಂದ ಜಾರಿಗೆ ತರಲಾಯಿತು ಆಗಾ ಕೇಂದ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತವಿತ್ತು ಎಂದು ನೆನಪಿಸಿಕೊಂಡರು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯು ಹೊಸದೆನಲ್ಲ ಈ ಹಿಂದೆ ೨೦೧೫,೨೦೧೬,೨೦೨೦, ೨೦೨೧ ಹಾಗೂ ೨೦೨೬ ಸೇರಿದಂತೆ ಈವರೆಗೆ ೭೬ ಭಾರಿ ಸೋರಿಕೆಯಾಗಿರುವುದು ಇದರ ನೈತಿಕ ಹೊಣೆಕೆಯು ಕೇಂದ್ರ ಸರ್ಕಾರದ್ದಾಗಿದೆ. ಈವರೆಗೆ ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿಗಳ ಸಂಖ್ಯೆ ಲೆಕ್ಕವಿಲ್ಲದಂತಾಗಿದೆ. ಬೇಜವಾಬ್ದಾರಿಯ ಆಡಳಿತವನ್ನು ಇಡೀ ರಾಷ್ಟ್ರವೇ ಖಂಡಿಸಿದೆ. ಇದರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳ ಬೇಕಾಗಿದೆ. ಈ ಕುರಿತು ಪ್ರತಿಪಕ್ಷಗಳು ಪ್ರತಿಭಟಿಸುವ ಮೂಲಕ ಗಮನ ಸೆಳೆದರೂ ಸಹ ಯಾವೂದೇ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಉದ್ದೇಶ ಪೂರ್ವಕವಾಗಿ ನಡೆಸಲಾಗಿದೆ. ಇದರ ಹಿಂದೆ ಪಟ್ಟಭದ್ರಸಕ್ತರ ಕೈವಾಡ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದರು.
ರಾಷ್ಟ್ರದಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಸಲು ಪೊಲೀಸ್ ನೆರವು ಪಡೆಯುವುದು ಸಹಜ ಅದರೆ ರಾಷ್ಟ್ರ ಕಾಯುವ ಮಿಲಿಟರಿ ಪಡೆಯನ್ನು ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸುವುದು ಹಾಸ್ಯಾಸ್ಪದವಾಗಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಪ್ರತಿಭಾವಂತರು ಇವರ ಕಣ್ಗಾವಲಿಕೆ ಮಿಲಿಟರಿ ಪಡೆಯನ್ನು ನಿಯೋಜಿಸಲು ಇವರೇನೂ ಭಯೋತ್ಪಾಕರೇ? ಇದಕ್ಕೆ ಭರಿಸ ಬೇಕಾದ ಖರ್ಚು ವೆಚ್ಚಗಳೆಷ್ಟು ಎಂದು ಪ್ರಶ್ನಿಸಿದರು.
ನೀಟ್ ಪರೀಕ್ಷೆಯು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವು ಅವಲಂಭಿತವಾಗಿದೆ. ಪ್ರಶ್ನೆ ಪತ್ರಿಕೆಯ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳ ಬೇಕು. ಈ ರೀತಿಯ ನಿರ್ಲಕ್ಷತೆ, ಬೇಜವಾಬ್ದಾರಿಯಿಂದ ಪ್ರಶ್ನೆ ಪತ್ರಿಕೆ ಮುಂದೆಯೋ ಅಗುವುದಿಲ್ಲ ಎಂಬುವುದಕ್ಕೆ ಖಾತ್ರಿ ಏನೆಂದು ಪ್ರಶ್ನಿಸಿದರು. ಇದು ಕೇಂದ್ರ ಸರ್ಕಾರದ ಉತ್ತರದಾಯಿಕತ್ವ ಹೊಣೆಗಾರಿಕೆಯನ್ನು ಹೊರ ಬೇಕಾಗಿದೆ ಎಂದು ಹೇಳಿದರು.
ಇದು ಕೇಂದ್ರ ಸರ್ಕಾರ ಆಡಳಿತದ ವೈಪಲ್ಯತೆಯ ಪರಮಾವಧಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ ಎಂದ ಅವರು ವಿರೋಧ ಪಕ್ಷಗಳ ಪ್ರತಿಭಟನೆಯ ವಾಸ್ತಾವಂಶಗಳನ್ನು ಗೌರವಿಸುವಂತಾಗ ಬೇಕು ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಲ್ಲಂಘಿಸಿದಂತಾಗಿ ಸಾರ್ವಧಿಕಾರವನ್ನು ಪಾಲನೆ ಮಾಡಿದಂತಾಗುವುದು ಎಂದು ಕಿವಿ ಮಾತು ತಿಳಿಸಿದರು.
ಮಾನವ ಸಂಪನ್ಮೊಲ ಸಚಿವರಾದ ಧರ್ಮೆಂದ್ರ ಪ್ರಧಾನ್ ಅವರು ಕೊಡಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡ ಬೇಕು. ಈ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವಂತಾಗ ಬೇಕು. ರಾಷ್ಟ್ರದಲ್ಲಿ ನಡೆದ ಪ್ರತಿಭಟನೆಗಳನ್ನು ನಿರ್ಲಕ್ಷಿಸದೆ ಪ್ರಧಾನ ಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಈ ಹಗರಣದ ಬಗ್ಗೆ ಪ್ರತಿಕ್ರಿಯಿಸ ಬೇಕೆಂದು ಆಗ್ರಹ ಪಡೆಸಿದರು.
ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟನೆಯಲ್ಲಿ ಈ ಹಿಂದಿನ ಪದ್ದತಿಯಂತೆ ಪಿ.ಯು.ಸಿ. ಪರೀಕ್ಷೆಯ ಶೇ ೫೦ರಷ್ಟು ಅಂಕಗಳನ್ನು ಎಂದು ಒತ್ತಾಯಿಸಿದರು.

































