Home ಜಿಲ್ಲೆ ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿನಿಯರಿಗೆ4.42 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ

ಮಲಬಾರ್ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿನಿಯರಿಗೆ4.42 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣೆ

ಬೀದರ್: ಮೇ.22:ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ, ಬೀದರನಲ್ಲಿ ಇಂದು ದಿನಾಂಕ 20-5-2026 ರಂದು ಮಲಬಾರ್ ಚಾರಿಟೇಬಲ್ ಟ್ರಸ್ಟ್ ನ, ಮಲಬಾರ್ ಗೋಲ್ಡ್ & ಡೈಮಂಡ್ಸ್, ಬೀದರ್ ಸಂಸ್ಥೆಯು ‘ಮಹಿಳಾ ಸಬಲೀಕರಣ’ ಎಂಬ ಯೋಜನೆಯಡಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರ ಶಿಕ್ಷಣ, ವಸತಿ, ಉದ್ಯೋಗ, ಆರೋಗ್ಯ ಸಾಮಥ್ರ್ಯ ವೃದ್ಧಿಸಲು ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಭಾಲ್ಕಿ ಪ್ರಥಮ ದರ್ಜೆ ಕಲೇಜಿನ ಒಟ್ಟು 55 ಅರ್ಹ ವಿದ್ಯಾರ್ಥಿನಿಯರಿಗೆ 4 ಲಕ್ಷ 42 ಸಾವಿರ ಮೊತ್ತದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೈನಿ ರಾಜೇಂದ್ರಕುಮಾರ ರಾಜ್ಯ ಸಲಹೆಗಾರ ಅಕ್ಕಪಡೆ ಇವರು ಆಗಮಿಸಿ ಮಾತನಾಡುತ್ತ “ಹಿಂದಿನ ಕಾಲದಲ್ಲಿ ಗನ್ ಹಿಡಿದುಕೊಂಡು ಯುದ್ಧ ಮಾಡುತ್ತಾ ಇದ್ದರು. ಆದರೆ ಇಂದು ನಾವು ನಾವು ‘ಶಿಕ್ಷಣ’ ವೆಂಬ ಗನ್ ಹಿಡಿದುಕೊಂಡು ಹೋರಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ಚೆನ್ನಾಗಿ ಓದಬೇಕು. ಶಿಕ್ಷಣ ಕಲಿಕೆಯಿಂದಲೇ ಯಾವುದಾದರೂ ಉತ್ತಮ ಸ್ಥಾನ ಪಡೆಯಲು ಸಾಧ್ಯ ಎಂದರು.

ಯಾವ ಕೋರ್ಸ ಸಣ್ಣದಲ್ಲ. ಅದು ಕೀಳೆಂದು ಭಾವಿಸಬಾರದು. ಆಟ್ಸ್, ಸೈನ್ಸ್, ಕಾಮರ್ಸ್ ಯಾವದೇ ಇರಲಿ ಆ ವಿಷಯಗಳಲ್ಲಿ ಭಕ್ತಿ ಇಟ್ಟು ಓದಬೇಕು. ನಮ್ಮದೇ ಆದ ಪ್ರಯತ್ನದಿಂದ ಮುಂದೆ ಬರಬೇಕು. ನೀವು ಯಾವುದೇ ಕೋರ್ಸ್ ಮಾಡಿದರೂ ಸಹ ನಮ್ಮ ಮಲಬಾರ್ ಟ್ರಸ್ಟ್ ಸದಾಕಾಲ ಸಹಾಯ ಸಹಕಾರ ಮಾಡುತ್ತದೆ ಎಂದು ಹೇಳಿದರು”.

ಇನ್ನೋರ್ವ ಅತಿಥಿಗಳಾದ ಬೀದರ ಮಹಾನಗರ ಪಾಲಿಕೆ ಮೇಯರ್ ಶ್ರೀ ಮಹಮ್ಮದ್ ಗೌಸ್ ಅವರು ಮಾತನಾಡುತ್ತ “ಮಹಿಳಾ ಸಬಲೀಕರಣ ಮಾಡುವ ಘನ ಉದ್ದೇಶವನ್ನು ಹೊತ್ತು ದೇಶದ ಮೂಲೆ ಮೂಲೆಗೆ ಹೋಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಿ ಸಬಲೀಕರಣ ಗೊಳಿಸುತ್ತಿರುವ ‘ಮಲಬಾರ ಟ್ರಸ್ಟ’ನ ಕಾರ್ಯ ಶ್ಲಾಘನೀಯ. ಟ್ರಸ್ಟಗಳು ಇಂತಹ ಉತ್ತಮ ಕಾರ್ಯಗಳು ಮಾಡಬೇಕು ” ಎಂದು ಸಲಹೆ ನೀಡಿದರು.

ಇನ್ನೋರ್ವ ಅತಿಥಿಗಳಾದ ಶ್ರೀ ಸಂಗೀತಾ ಎಮ್.ಬಿ ಪೆÇೀಲಿಸ್ ಸಹಾಯಕ ಉಪನಿರೀಕ್ಷಕರು ಬೀದರ ಹಾಗೂ ಅಕ್ಕ ಪಡೆ ಇವರು “ಕಾಲೇಜಿನಲ್ಲಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿ, ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ಅಧಿಕಾರಿಗಳಾಗಿ ಜೀವನದಲ್ಲಿ ಮುಂದೆ ಬರಬೇಕು. ಈ ಟ್ರಸ್ಟ್ ಮಾಡುತ್ತಿರುವಂತೆ ತಾವು ಸಹ ಸಹಾಯ ಮಾಡುವ ಸಾಮಥ್ರ್ಯ ಪಡೆಯಬೇಕೆಂದು” ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ, ಬೀದರನ ಪ್ರಾಂಶುಪಾಲರಾದ ಪೆÇ್ರ. ಶಂಕರ ಕೆ. ಗಣಗೊಂಡ ಅವರು ಮಾತನಾಡುತ್ತ “ಮಹಿಳೆಯರನ್ನು ಸಬಲೀಕರಣ ಗೊಳಿಸಬೇಕೆಂಬ ಯೋಜನೆಯಡಿ ಮಲಬಾರ ಟ್ರಸ್ಟನವರು ಹಾಕಿಕೊಂಡ ಯೋಜನೆ ಉತ್ತಮವಾಗಿದ್ದು, ನಮ್ಮ ಕಾಲೇಜಿನ 23 ವಿದ್ಯಾರ್ಥಿನಿಯರಿಗೆ ಇದರ ಸದುಪಯೋಗವಾಗಿದ್ದು ನನಗೆ ಬಹಳ ಸಂತೋಷ ತಂದಿದೆ. ಟ್ರಸ್ಟಿಗೆ ಧನ್ಯವಾದಗಳು.

ಭಾರತ ದೇಶದಲ್ಲಿ ಅನೇಕ ಟ್ರಸ್ಟ್ ಗಳಿವೆ. ಆದರೆ ಅವು ಹೆಚ್ಚಾಗಿ ಇಂತಹ ಒಳ್ಳೆಯ ಕಾರ್ಯಕ್ಕೆ ಮುಂದೆ ಬರುವುದಿಲ್ಲ. ಕೆಲವು ಮಾತ್ರ ಟ್ರಸ್ಟ್ ಗಳು, ಸಂಸ್ಥೆಗಳು ಇಂಥ ಉತ್ತಮ ಕಾರ್ಯಗಳನ್ನು ಮಾಡುತ್ತಿವೆ. ಅಂಥ ಸಂಸ್ಥೆಗಳಲ್ಲಿ ಮಲಬಾರ್ ಟ್ರಸ್ಟ್ ಕೂಡ ಒಂದಾಗಿದ್ದು, ಅದು ಇನ್ನೂ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಮುಂದೆ ಬರಲಿ. ವಿಶೇಷವಾಗಿ ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳ ಶಿಕ್ಷಣಕ್ಕಾಗಿ ಸದುಪಯೋಗವಾಗಲಿ” ಎಂದು ಹೇಳಿದರು.

ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನ ಪಡೆದರು. ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ . ರಾಜಕುಮಾರ ಅಲ್ಲೂರೆ, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯಂ ಚಾಲಾಕ ಪ್ರಾಧ್ಯಾಪಕರುಗಳಾದ ಡಾ. ಅಶೋಕ್ ಕೋರೆ,ಡಾ .ಸುಚಿತಾನಂದ ಮಲ್ಕಾಪೂರೆ, ಪೆÇ್ರ.ಶ್ರೀಕಾಂತ ಪಾಟೀಲ,ಡಾ.ಎಲಿಶಾ ಡಿ.ಡಾ.ಈಶ್ವರಯ್ಯ ಕೋಡಂಬಲ್,ಮಲಬಾರ್ ಟ್ರಸ್ಟಿನ ಮುಖ್ಯಸ್ಥ ಶ್ರೀ ಜಿಷ್ಣು ಎನ್. ಸಾಜು ಸ್ಟೋರ್ ಹೆಡ್, ಮಾರುಕಟ್ಟೆ ಮ್ಯಾನೆಜರ್ ಅಬ್ದುಲ್ ಮುಬಿನ ಮೊದಲಾದ ಸಿಬ್ಬಂದಿಗಳು ಇದ್ದರು.