
ಕಲಬುರಗಿ,ಜೂ 19: ನಗರದ ಶೇಕರೋಜ ಮಹಾದೇವ ನಗರದ ಅಕ್ಕಮಹಾದೇವಿ ದೇವಸ್ಥಾನ ಅವರಣದಲ್ಲಿ ಕಲಬುರಗಿಯ ಶ್ರೀ ಚನ್ನಬಸವ ಸಂಗೀತ ಮತ್ತು ಸಾಂಸ್ಕøತಿಕ ಸೇವಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು
ಸಾನಿಧ್ಯವಹಿಸಿ ಮಾತನಾಡಿದ ಓಂಕಾರ ಬೆನೂರ ಮಹಾಲಿಂಗೇಶ್ವರ ಮಠ ಪೂಜ್ಯರಾದ ಸಿದ್ದರೇಣುಕ ಶಿವಾಚಾರ್ಯರು ಸಂಗೀತವನ್ನು ಆಸ್ವಾದಿಸುವಂತಹ ವ್ಯಕ್ತಿಗಳ ನಡವಳಿಕೆಯಲ್ಲಿ ದ್ವೇಷ, ಕ್ರೂರತನ ಮುಂತಾದವುಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ ಎಂಬಿತ್ಯಾದಿ ಅಂಶಗಳು ದೃಢಪಟ್ಟಿವೆ, ಸಂಗೀತಕ್ಕೆ ಸಪ್ತಸ್ವರ ಮೂಲಾಧಾರ ಎಂದರು. ಶಂಕರಯ್ಯ ಸ್ವಾಮಿ ಹಿರೇಮಠ ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ಯುವರಾಜ ಬಿರಾದಾರ, ಶ್ರವಣಕುಮಾರ ಮಹಾಗಾಂವ ರಾಚಮ್ಮಎಸ್. ಬೀದಿಮನಿ
ಆಗಮಿಸಿದರು,ಸಪ್ತಸ್ವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಅಣ್ಣಾರಾವ ಶಳ್ಳಗಿ ಮತ್ತಿಮೂಡ, ತೋದಯ್ಯಶಾಸ್ತ್ರೀಗಳು, ಅಬ್ಬೆತುಮಕೂರ,ಶಿವಶರಣಯ್ಯಸ್ವಾಮಿ ನಿಂಗದಳ್ಳಿ,ಪ್ರಶಾಂತ ಗೋಲ್ಡ್‍ಸ್ಮಿತ್, ನಂದಿನಿ ಪೆÇದ್ದಾರ, ವಿಜಯಲಕ್ಷ್ಮೀ ಕೆಂಗನಾಳ, ಶ್ರೀಶೈಲ ವಗ್ಗಾಲಿ ಪಾಲ್ಗೊಂಡರು.ಹಾರ್ಮೋನಿಯಂ ಸಾಥ್ ಬಸವರಾಜ ಸ್ಥಾವರಮಠ, ಸೋಮಯ್ಯ ಸಿಧನೂರ,ಅನೀಲ ಮಠಪತಿ ಭೀಮಳ್ಳಿ, ಆನಂದ ನಂದಿಕೋಲಮಠ,ತಬಲಾ ಸಾಥ್ ರೇವಣಸಿದ್ದ ಹೂಗಾರ ದೇಸಾಯಿ ಕಲ್ಲೂರ,ಮೌನೇಶ ಪಂಚಾಳ ಕಲಬುರಗಿ ನಾಗರಾಜ ಶೇರಿಕಾರ ಉದನೂರ ನೀಡಿದರು.ಸಂಸ್ಥೆ ಸದಸ್ಯರಾದ ಚೇತನ ಬೀದಿಮನಿ ಸ್ವಾಗತಿಸಿದರು,ಬಂಡಯ್ಯ ಶಾಸ್ತ್ರೀಗಳು ನಿರೂಪಿಸಿದರು ವಿಶ್ವಾರಾದ್ಯ ಸೇವಾ ಸಮಿತಿಯ ಬಸವರಾಜ ಶೀಲವಂತ ಉಪಸ್ಥಿತರಿದ್ದರು






















