Home ಜಿಲ್ಲೆ ಕಲಬುರಗಿ ಜೀವನ ಸಮಾಜದ ಏಳಿಗೆಗಾಗಿ ಮುಡುಪಾಗಿರಲಿ :ನಾಗಯ್ಯ ಸ್ವಾಮಿ ಹಿರೇಮಠ

ಜೀವನ ಸಮಾಜದ ಏಳಿಗೆಗಾಗಿ ಮುಡುಪಾಗಿರಲಿ :ನಾಗಯ್ಯ ಸ್ವಾಮಿ ಹಿರೇಮಠ

ಚಿತ್ತಾಪುರ:ಏ.೨೨:ನಮ್ಮ ಜೀವನ ಎನ್ನುವುದು ಸ್ವಂತಕ್ಕಾಗಿ ಮುಡುಪಾಗಿಟ್ಟುಕೊಳ್ಳದೆ ಸಮಾಜಕ್ಕಾಗಿ ಮುಡುಪಾಗಿಟ್ಟುಕೊಂಡರೆ ಜೀವನ ಸ್ವಾರ್ಥಕ ಆಗುತ್ತದೆ ಎಂದು ದಂಡಾಧಿಕಾರಿ ನಾಗಯ್ಯ ಸ್ವಾಮಿ ಹಿರೇಮಠ ಹೇಳಿದರು.
ಚಿತ್ತಾಪುರ ಪಟ್ಟಣದ ತಹಶೀಲ್ ಕಛೇರಿಯ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ನಡೆದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾವು ಪ್ರತಿನಿತ್ಯ ನಮ್ಮ ಸ್ವಂತಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಬದುಕುತ್ತಿದ್ದೆವೆ,ಹಿಂದಿನ ಮಹಾಪುರುಷರು ಸಂಸಾರ ಮತ್ತು ಸಂಬAಧಗಳನ್ನು ಬದಿಗಿಟ್ಟು ಸಮಾಜಕ್ಕಾಗಿ,ದರ್ಮದ ಉಳುವಿಗಾಗಿ ಹೋರಾಟಮಾಡಿ ತಮ್ಮ ಜೀವನವೇ ಮುಡುಪಾಗಿಟ್ಟು ತಮ್ಮ ಜೀವನ ಸ್ವಾರ್ಥಕ ಮಾಡಿಕೊಂಡಿದ್ದಾರೆ, ಅದರ ಪ್ರತಿಫಲವಾಗಿಯೇ ಇಂದು ಅಂತಹ ಮಹಾಪುರುಷರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ.
ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ನಾವುಗಳು ಸಹಿತ ಸ್ವಾರ್ಥಕ್ಕಾಗಿ ಜೀವನ ಮಾಡದೇ ಸಮಾಜಕ್ಕಾಗಿ ಮುಡುಪಾಗಿಟ್ಟುಕೊಂಡರೆ ಜೀವನ ಸ್ವಾರ್ಥಕ ಆಗುತ್ತದೆ ಎಂದು ಹೇಳಿದರು.
ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಕುಮಾರಿ ಅಕ್ಷತಾ ಜಾನೀಬ್ ಅವರು ಜೀವನ ಚರಿತ್ರೆಯನ್ನು ತಿಳಿಸಿದರು.
ವಿಪ್ರ ಸಮಾಜದ ಕಾಶಾಧ್ಯಕ್ಷ ಜಯಂತ ಮಾಲಗತ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ರಾಜಕುಮಾರ್ ಮರತೂರ್, ಅಶ್ವತ್ಥನಾರಾಯಣ ಕುಲಕರ್ಣಿ,ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ,ವಿಪ್ರ ಸಮಾಜದ ತಾಲೂಕ ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ,ತಾಲೂಕ ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್,ಹಣಮೇಶ್ ಆಚಾರ್ಯ,ಭೀಮರಾವ್ ಅಫಜಲಪುರಕರ್,ಗೌತಮ್ ನಾಯಕ್,ಗೋಪಾಲ್,ಸುರೇಶ್ ಕುಲಕರ್ಣಿ,ಗುಂಡೆರಾವ್ ಸರಾಫ್,ಪ್ರಕಾಶ್ ಮಾಲಖರೆ, ರಾಘವೇಂದ್ರ ಜಾನೀಬ್,ಮಾಣಿಕರಾವ್ ಡೋಣಗಾಂವ್,ರಾಘವೇAದ್ರ ಡೋಣಗಾಂವ್,ಸAಜೀವ್ ಜಾನೀಬ್,ನರಹರಿ ಮೋಹರೀರ್,ಆನಂದ ಪಟವಾರಿ,ಕಿಶನರಾವ್ ಕುಲಕರ್ಣಿ,ಸರೋಜಾ ಅಫಜಲಪುರಕರ್, ಶೃತಿ ಜಾನೀಬ್ ಸಕ್ಕುಬಾಯಿ ಕುಲಕರ್ಣಿ,ಲಕ್ಷ್ಮಿಬಾಯಿ ಸರಾಫ್,ಕಾವೇರಿ,ಜೋಶಿ,ವೈಜಯಂತಿ ಕುಲಕರ್ಣಿ,ಚಂದ್ರಕಲಾ ಡೋಣಗಾಂವ್,ಛಾಯಾ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.