
ತಾಳಿಕೋಟೆ:ಜೂ.೧: ಪಟ್ಟಣದ ರಜಪೂತ ಸಮಾಜದ ಮಹಿಳಾ ಮಂಡಳದ ನೇತೃತ್ವದಲ್ಲಿ ಅಧಿಕ ಮಾಸದ ನಿಮಿತ್ಯವಾಗಿದೆ ಶ್ರೀ ಅಂಬಾಭವಾನಿ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅಂಗವಾಗಿ ನಸುಕಿನ ಜಾವ ಅರ್ಚಕರಾದ ವೇ.ಭೀಮಾಶಂಕರ ಜೋಶಿ ಅವರಿಂದ ಶ್ರೀದೇವಿಯ ಮಹಾ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾ ಮಂಗಳಾರತಿ ಕಾರ್ಯಕ್ರಮವು ಜರುಗಿತು.
ಇದೇ ಸಮಯದಲ್ಲಿ ಅಧಿಕಮಾಸದ ನಿಮಿತ್ಯವಾಗಿ ಪರೋಪಕಾರ ದಾನಸ್ವರೂಪಿಣಿಯಾಗಿ ಮಹಿಳಾ ಮಂಡಳದ ವತಿಯಿಂದ ವೇ.ಭೀಮಾಶಂಕರ ಜೋಶಿ ಗುರುಗಳಿಗೆ ಕಾಣಿಕೆಯನ್ನು ಅರ್ಪಿಸಿದರು.
ಈ ಸಮಯದಲ್ಲಿ ರಜಪೂತ ಸಮಾಜದ ಮಹಿಳಾ ಮಂಡಳದ ಮುಖಂಡರಾದ ಶ್ರೀಮತಿ ಜ್ಯೋತಿ ಗೌಡಗೇರಿ, ಪದ್ಮಾ ಹಜೇರಿ, ಅಂಬಿಕಾ ಮೂಲಿಮನಿ, ಭಾರತಿ ಹಜೇರಿ, ಸಂತೋಷಿ ಮೂಲಿಮನಿ, ಅನುರಾಧಾ ಹಜೇರಿ, ತೃಪ್ತಿ ಹಜೇರಿ, ಮಂಜುದೇವಿರಾಣಿ ಹಜೇರಿ, ಸುವರ್ಣಾ ವಿಜಾಪೂರ, ಗೀತಾ ಭಾಯಸ್, ಶಾಂತಾ ವಿಜಾಪೂರ, ಅನೀತಾ ಟೀಚರ್, ಮೀನಾಕ್ಷೀ ನರಗುಂದ, ಜಗು ವಿಜಾಪೂರ, ಕೌಶಲ್ಯಾ ಗೌಡಗೇರಿ, ಜೈಶ್ರೀ ಹಜೇರಿ, ಗೀತಾ ಹಜೇರಿ, ಅಂಜಿಲಿ ಗೌಡಗೇರಿ, ಕಾಶಿಬಾಯಿ ಕೊಡೇಕಲ್ಲ, ಸುಧಾ ನರಗುಂದ, ನಿರ್ಮಲಾ ಹಜೇರಿ, ನಿರ್ಮಲಾ ಕೊಕಟನೂರ, ಸುಜಾತಾ ಹಜೇರಿ, ಉಮಾ ಹಜೇರಿ,. ವೀಣಾ ಹಜೇರಿ, ಮೀನಾಕ್ಷೀ ಇಂದಿರಾನಗರ, ಕಲಾವತಿ ಹಜೇರಿ, ರಾಣಿ ಗೌಡಗೇರಿ, ಉಮಾ ರಜಪೂತ, ಶ್ವೇತಾದೇವಿ, ಕೀರ್ತಿ ಹಜೇರಿ, ವರ್ಷಾ ಮೂಲಿಮನಿ, ಶಿವಾನಿ ಕೊಕಟನೂರ, ರಮ್ಯಾ ಕೊಕಟನೂರ, ಅನೀತಾ ಗೌಡಗೇರಿ, ಮಂಜು ದೇವಿ, ಗೀತಾ ದೇವಿ, ಜಯಶ್ರೀ ವಸಂತ, ಅನೀತಾ ಗೌಡಗೇರಿ, ಅಂಬು ಮೂಲಿಮನಿ, ಲಲೀತಾ ಗೌಡಗೇರಿ, ಪೂಜಾ ನರಗುಂದ, ಮೀನಾ ಹಜೇರಿ, ವಿಜಯಲಕ್ಷಿö್ಮÃ ಲವರಕರ, ಮೊದಲಾದವರು ಇದ್ದರು.






















