Home ಜಿಲ್ಲೆ ಖೇತ ಬಚಾವೋ ತರಬೇತಿ ಶಿಬಿರ

ಖೇತ ಬಚಾವೋ ತರಬೇತಿ ಶಿಬಿರ


ಮುನವಳ್ಳಿ,ಜೂ.೧೫: ಜಿಲ್ಲಾ ಪಂಚಾಯತ ಬೆಳಗಾವಿ, ಕೃಷಿ ಇಲಾಖೆ ಸವದತ್ತಿ, ಆಯ್.ಸಿ.ಎ.ಆರ್ ಕೆಎಲ್.ಇ ಕೆವಿಕೆ ಮತ್ತಿಕೊಪ್ಪ ಇವರುಗಳ ಸಂಯೋಗದಲ್ಲಿ ೨೦೨೬-೨೭ ನೇ ಸಾಲಿನ ಅತ್ಮಾ ಯೋಜನೆಯಡಿ ರೈತರ ತರಬೇತಿ ಗೊಂದಿ ಗ್ರಾಮದ ಜಗದೀಶ ಹಿರೇಮಠ ಇವರ ಸಾವಯವ ಕೃಷಿ ತೋಟದಲ್ಲಿ ಖೇತ ಬಚಾವೋ ಆಂದೋಲನ ತರಬೇತಿ ಶಿಬಿರ ಜರುಗಿತು.


ತರಬೇತಿ ಶಿಬಿರ ಉದ್ಘಾಟಿಸಿದ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿ ಮಣ್ಣು ಫಲವತ್ತತೆಯಿಂದ ಇರಲು ಸಾವಯವ ಕೃಷಿಗೆ ರೈತರು ಮುಂದಾಗಬೇಕು ನಾವೆಲ್ಲರೂ ಆರೋಗ್ಯದಿಂದ ಇರಲು ಮಣ್ಣಿನ ಆರೋಗ್ಯ ಬಹಳ ಮುಖ್ಯ ಆದಕಾರಣ ಸಾವಯವ ಕೃಷಿಗೆ ರೈತರು ಹೆಚ್ಚಿನ ಆಧ್ಯತೆ ನೀಡಿ ಉತ್ತಮ ಬೆಳೆ ಬೆಳೆದು ರೈತರು ಇದರ ಲಾಭ ಪಡೆಯಬೆಕೆಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ತ ಮಂಜುನಾಥ ಚೌರಡ್ಡಿ ಗೋ ಆಧಾರಿತ ಕೃಷಿಯಿಂದ ಮಣ್ಣಿನ ಫಲವತ್ತತೆ ಉತ್ತಮವಾಗಲು ಸಾಧ್ಯ ಎಂದರು.
ಎಚ್.ಡಿ.ಕೊಳೇಕರ, ಶಿವಪ್ರಕಾಶ ಪಾಟೀಲ, ಮಣ್ಣು ವಿಜ್ಞಾನಿ ವಾರದ ಗ್ರಾಮಸ್ಥರು ರೈತರು ಉಪಸ್ಥಿತರಿದ್ದರು.