
ತುಮಕೂರು, ಮೇ ೧೧- ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿ. ಕೆಂಪರಾಜು ನೇಮಕವಾಗಿದ್ದಾರೆ.
ಜಿಲ್ಲಾ ಜೆಡಿಎಸ್ ಅಧಕ್ಷ ಹೆಚ್. ನಿಂಗಪ್ಪ ಅವರು ಈ ನೇಮಕ ಮಾಡಿ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಂಪರಾಜುಗೆ ನೇಮಕಾತಿ ಪತ್ರ ವಿತರಿಸಿದರು.
ಕೆಂಪರಾಜು ಅವರು ಈ ಮೊದಲು ಜೆಡಿಎಸ್ ಸೇವಾದಳ ಘಟಕದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಈಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ರಾಜ್ಯ ಎಸ್.ಟಿ. ಘಟಕ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ನಗರ ಅಧ್ಯಕ್ಷ ಟಿ.ಹೆಚ್. ಜಯರಾಮ್, ನಗರಸಭೆ ಮಾಜಿ ಸದಸ್ಯರಾದ ಟಿ.ಜಿ. ನರಸಿಂಹರಾಜು, ಮೋಹನ್‌ಕುಮಾರ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಕಾಮರಾಜು, ಮುಖಂಡರಾದ ಬೆಳಗುಂಬ ವೆಂಕಟೇಶ್, ದಿಬ್ಬೂರು ವಿಜಯಕುಮಾರ್, ಪ್ರಮೋದ್‌ಗೌಡ, ದಿವಾಕರ್, ಲಕ್ಷ್ಮಿನರಸಿಂಹ ಮತ್ತಿತರರು ಕೆಂಪರಾಜು ಅವರನ್ನು ಅಭಿನಂದಿಸಿದರು.


























