Home ಜಿಲ್ಲೆ ಕಲಬುರಗಿ ದಂಡ ಪಾವತಿಸದೇ ಕಾರಾಗೃಹದಲ್ಲಿ ಉಳಿದ ಬಂದಿಗೆ ನೆರವಿನ ಹಸ್ತ

ದಂಡ ಪಾವತಿಸದೇ ಕಾರಾಗೃಹದಲ್ಲಿ ಉಳಿದ ಬಂದಿಗೆ ನೆರವಿನ ಹಸ್ತ

ಕಲಬುರಗಿ,ಮೇ.13: ದಂಡದ ಹಣ ಪಾವತಿಸದೇ ಕಾರಾಗೃಹದಲ್ಲಿಯೇ ಉಳಿದ ಬಂದಿಗೆ ಮಾನವೀಯತೆ ಮೇರೆಗೆ ಹಣ ಪಾವತಿಸಿ ಸಹಕರಿಸಿದ ಘಟನೆ ನಡೆದಿದೆ.
ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ರಮೇಶ್ ಶಿವರಾಯ ಕಲಗೂರ್ತಿ ಎಂಬಾತನು ದಂಡದ ಹಣ ಕಟ್ಟಲು ಅರ್ಥಿಕವಾಗಿ ದುರ್ಬಲರಾದ ಕಾರಣ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದನ್ನು ಈ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಗಮನಿಸಿ ಸ್ಥಳೀಯ ಸಂಸ್ಥೆ ಜಮೀಯತ್ ಉಲಮಾ ಸೊಸೈಟಿಯನ್ನು ಸಂಪರ್ಕಿಸಿ ದಂಡ ಮೊತ್ತ ರೂ. 18 ಸಾವಿರ ರೂ ಮೊತ್ತವನ್ನು ಪಾವತಿಸಲು ಕೋರಲಾಗಿತ್ತು. ಅದರಂತೆ ಅವರುಗಳು ಅರ್ಥಿಕವಾಗಿ ದುರ್ಬಲರಾದ ಬಂದಿಗಳ ದಂಡದ ಹಣ ಪಾವತಿಸಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಹಣ ಪಾವತಿಸುವ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ, ಜಮೀಯತ್ ಉಲಮಾ ಸೊಸೈಟಿಯ ಮಹ್ಮದ್ ಶರೀಫ್ ಮಹ್ಮದ್ ಇಸ್ಮಾಯಿಲ್, ಮಹ್ಮದ್ ವಾಜೀದ್ ಇಮಾಮ್ ಪಟೀಲ್, ಸಯ್ಯಾದ್ ಸಾಧೀಕ್ ಸಯ್ಯಾದ್ ಅಬ್ದುಲ್ ರಶೀದ್, ಜಾಕಿಯೂದ್ಧೀನ್ ನಸಿರೂದ್ದೀನ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಮುಖ್ಯ ವೀಕ್ಷಕರಾದಸಲೀಂ ಮುಲ್ಲಾ ಹಾಗೂ ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ ಭಾಗವಹಿಸಿದರು.