ಕಲಬುರಗಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಟೈರ್ ಸುಟ್ಟು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಶಕೀಲ್ ಅಹಮದ್ ಸರಡಗಿ,ಶ್ರೀನಿವಾಸ ರಾಠೋಡ್,ಶಿವಾನಂದ ಹೊನಗುಂಟಿ,ಈರಣ್ಣ ಪಾಟೀಲ ಝಳಕಿ, ಕಾರ್ತಿಕ್ ನಾಟೇಕರ್, ಅಸ್ಲಂ ಸಿಂದಗಿ,ಫಾರೂಕ್ ಪಟೇಲ್ ಮುಡಬಾಳ್ ಸೇರಿದಂತೆ ಹಲವರು ಪಾಲ್ಗೊಂಡರು.