Home ಜಿಲ್ಲೆ ಕಲಬುರಗಿ ಅಧಿಕಮಾಸದಲ್ಲಿ ಪ್ರತಿದಿನ ಪವಮಾನ ಹೋಮ

ಅಧಿಕಮಾಸದಲ್ಲಿ ಪ್ರತಿದಿನ ಪವಮಾನ ಹೋಮ

ಕಲಬುರಗಿ,ಮೇ 13: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಅಧಿಕ ಮಾಸದ ನಿಮಿತ್ತ ಮೇ.17 ರಿಂದ ಜೂನ್ 15 ರ ವರೆಗೆ ಒಂದು ತಿಂಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಒಂದು ತಿಂಗಳು ಪ್ರತಿದಿನವೂ ಬೆಳಿಗ್ಗೆ ಶ್ರೀ ಹನುಮಂತ ದೇವರಿಗೆ ವಿಶೇಷ ಅಭಿಷೇಕ, ಪವಮಾನ ಹೋಮ, ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ ಮಹಿಳೆಯರಿಂದ 33 ದಾಸರ ಪದಗಳ ಭಜನೆ, ನಂತರ ಪಂಡಿತರಿಂದ ಭಾಗವತ ಪ್ರವಚನ ನಡೆಯಲಿದೆ.
ಮೊದಲನೇ ವಾರ ಪಂ. ವೆಂಕಣ್ಣಾಚಾರ್ಯ ಮಳಖೇಡ, ಎರಡನೇ ವಾರ ಪಂ. ವಿಷ್ಣುಆಚಾರ್ಯ ಫಿರೋಜಾಬಾದ್, ನಂತರ ಪಂ. ಭಾರತೀಶಚಾರ್ಯ, ಪಂ. ಜಯತೀರ್ಥಆಚಾರ್ಯ, ಕೊನೇಯವಾರ ಪಂ. ದ್ವೈಪಾಯನಾಚಾರ್ಯ ಬೆಂಗಳೂರು ಅವರಿಂದ ಭಾಗವತ ಪ್ರವಚನ ನಡೆಯಲಿದೆ.ಜೂನ್ 14 ರಂದು ಶ್ರೀ ವಿಷ್ಣುಸಹಸ್ರನಾಮ ಮಹಾಯಾಗ ನಡೆಯಲಿದೆ ಎಂದು ಅರ್ಚಕ ಗುಂಡಾಚಾರ್ಯ ನರಿಬೋಳ ಅವರು ತಿಳಿಸಿದ್ದಾರೆ.