Home ಜಿಲ್ಲೆ ಕಲಬುರಗಿ ಎಕ್ವಿಟಾಸ್ ಸ್ಮಾಲ್ ಫೈನಾನ್ಸ್ ಲೈಸೆನ್ಸ್ ರದ್ದುಪಡಿಸಲು ಆಗ್ರಹ

ಎಕ್ವಿಟಾಸ್ ಸ್ಮಾಲ್ ಫೈನಾನ್ಸ್ ಲೈಸೆನ್ಸ್ ರದ್ದುಪಡಿಸಲು ಆಗ್ರಹ

ಜೇವರಗಿ,ಮೇ 13: ಆರ್ ಬಿ ಐ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ,ಸರಿಯಾದ ಕಾನೂನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಿಪಿಐವತಿಯಿಂದ ಎಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿ ಬ್ಯಾಂಕಿನ ಲೈಸೆನ್ಸ್ ರದ್ದುಪಡಿಸಲು ಆಗ್ರಹಿಸಲಾಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ ಮಹೇಶ್ ಕುಮಾರ್ ಮಾತನಾಡಿ, ಬ್ಯಾಂಕ್ ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಜನಸಾಮಾನ್ಯರಿಗೆ ದುಂಬಾಲು ಬಿದ್ದು ಸಾಲ ಕೊಡುತ್ತಿದೆ. ಅದಕ್ಕೆ ಬೇಕಾಬಿಟ್ಟಿಯಾಗಿ ದುಬಾರಿ ಬಡ್ಡಿಯನ್ನು ವಿಧಿಸುತ್ತಿದೆ. ಅದಕ್ಕೆ ಇ ಎಮ್ ಐ ಕಟ್ಟಲು ಸ್ವಲ್ಪ ವಿಳಂಬವಾದರೂ ಆರ್‍ಬಿಐನ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳಿಗೆ ವಿರುದ್ಧವಾಗಿ ಬೇಕಾದಷ್ಟು ದಂಡವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು, ಇ ಐ ಎಮ್ ಕಟ್ಟಲು ವಿಫಲವಾದರೆ ಯಾವುದೇ ನೋಟಿಸ್ ಕೊಡದೆ, ಕಾಲಾವಕಾಶ ಕೊಡದೇ ಏಕಾಏಕಿ ಮನೆಯನ್ನು ಸೀಸ್ ಮಾಡಲಾಗುತ್ತಿದೆ ಎಂದರು.
ಮಲ್ಲಾಬಾದ ಏತ ನೀರಾವರಿ ರೈತ ಹೋರಾಟ ಸಮಿತಿ ಸಂಚಾಲಕ ಬಾಬು ಬಿ ಪಾಟೀಲ್,ಆದರ್ಶ ಗ್ರಾಮ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಪಟೇಲ್ ಯಾಳವಾರ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಸೌಹಾರ್ದ ಸಮಿತಿಯ ತಾಲೂಕ ಅಧ್ಯಕ್ಷ ಹಬೀಬ್ ಜಮಾದಾರ್ ಜೈನಾಪುರ,ಕಾಂಗ್ರೆಸ್ ಮುಖಂಡಇಬ್ರಾಹಿಂ ಪಟೇಲ್ ಜೇವರ್ಗಿ ಹೋರಾಟ ಬೆಂಬಲಿಸಿ ಮಾತನಾಡಿದರು. ಮಹಮ್ಮದ್, ಸಾಜಿದ್ ಅಹಮದ್, ಚೌದರಿ, ರಾಘವೇಂದ್ರ ಹಂಗರಗಿ, ಮಲ್ಲಿಕಾರ್ಜುನ ಕಲ್ಲಹಂಗರಗಾ, ಸೈಯದ್ ಜಾಫರ್ ಹುಸೈನ್ ಆಂದೋಲ, ಕಾಂಗ್ರೆಸ್ ಮುಖಂಡರಾದ ಶಹಬುದ್ದೀನ್ ಕುಕನೂರ್, ಮಲ್ಲಣ್ಣ ಮುತ್ತಕೋಡ, ಶರಣಗೌಡ ಪೆÇಲೀಸ್ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು.