Home ಜಿಲ್ಲೆ ಕಲಬುರಗಿ ಮೂಲಭೂತ ಸೌಲಭ್ಯದಿಂದ ವಂಚಿತವಾದ ಕಡಕೋಳ ಪ್ರೌಢಶಾಲೆ

ಮೂಲಭೂತ ಸೌಲಭ್ಯದಿಂದ ವಂಚಿತವಾದ ಕಡಕೋಳ ಪ್ರೌಢಶಾಲೆ

ಜೇವರಗಿ,ಜು 12 : ಯಡ್ರಾಮಿ ತಾಲೂಕಿನ ಕಡಕೋಳ ಸರಕಾರಿ ಪ್ರೌಢ ಶಾಲೆಯಲ್ಲಿ 8,9,10 ನೇ ತರಗತಿಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಸಮಪರ್ಕವಾಗಿ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೇ ಇರುವುದಿಲ್ಲ ಇದರಿಂದಾಗಿ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಇಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ತರಗತಿಗೆ ಅನುಗುಣವಾಗಿ ಆಯಾ ವಿಷಯದ ಸಂಬಂಧಪಟ್ಟ ಶಿಕ್ಷಕರು ಇಲ್ಲದೆ ಕೇವಲ 2ಜನ ಶಿಕ್ಷಕರು ಮಾತ್ರ ಇರುವದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಬೋಧನೆ ಮಾಡಲು ಆಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆ ಕಲ್ಯಾಣ ಕರ್ನಾಟಕ ವಿಭಾಗಿಯ ಅಧ್ಯಕ್ಷ ಸುಧೀಂದ್ರ ಇಜೇರಿ ಉಪಾಧ್ಯಕ್ಷ ಸಂತೋಷಗೌಡ ಜಿ ಮಾಲಿ ಪಾಟೀಲ ಅವರು ಆರೋಪಿಸಿದ್ದಾರೆ.
ಈ ವಿಷಯದ ಕುರಿತು ವಿದ್ಯಾರ್ಥಿಗಳು ಸಂಘಟನೆಯ ಮುಖಂಡರ ಎದುರಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ಶಾಲೆಗೆ ಇಲ್ಲಿಯವರೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಾಲೂಕಿನ ಶಾಸಕರು ಯಾರು ಕೂಡ ಭೇಟಿನೀಡಿ ನಮ್ಮ ಸಮಸ್ಯೆ ಬಗೆಹರಿಸಿರುವದಿಲ್ಲ ಬಾಕಿ ಉಳಿದಿರುವ ಆಯಾ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿ, ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಇಲ್ಲದೆ ಹೋದರೆ ಧರಣಿ ಸತ್ಯಾಗ್ರಹ ಮಾಡುವುದ ಅನಿವಾರ್ಯವಾಗುತ್ತದೆ ಎಂದು ನಮ್ಮ ಕರ್ನಾಟಕ ಸೇನೆ ಕಲ್ಯಾಣ ಕರ್ನಾಟಕ ವಿಭಾಗ ಅಧ್ಯಕ್ಷ ಸುಧೀಂದ್ರ ಇಜೇರಿ ಉಪಾಧ್ಯಕ್ಷ ಸಂತೋಷಗೌಡ ಜಿ ಮಾಲಿ ಪಾಟೀಲ ಅವರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕ ಅಧ್ಯಕ್ಷರು ರವಿ ಪಾಟೀಲ. ಕನ್ನಡಪರ ಹೋರಾಟಗಾರ ಯಲ್ಲಪ್ಪ ದೋರಿ ಜನಿವಾರ ರಾಹುಲ್ ಸಿಂದಗಿ. ಅನೇಕರು ಸಂಘಟನೆಯ ಮುಖಂಡರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು