Home ಜಿಲ್ಲೆ ತುಮಕೂರು ಜೆಡಿಎಸ್‌ನ ಜೆಪಿಎಲ್ ಪೋಸ್ಟರ್ ಬಿಡುಗಡೆ

ಜೆಡಿಎಸ್‌ನ ಜೆಪಿಎಲ್ ಪೋಸ್ಟರ್ ಬಿಡುಗಡೆ

ತುಮಕೂರು, ಮೇ ೧೧- ಜಾತ್ಯತೀತ ಜನತಾದಳದ ಬೆಳ್ಳಿಹಬ್ಬ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ರಾಜ್ಯ ಯುವ ಜನತಾದಳ ಹಾಗೂ ಸಾಮಾಜಿಕ ಜಾಲತಾಣ ಮೇ ೧೫ರಿಂದ ೩ ದಿನಗಳ ಕಾಲ ಬೆಂಗಳೂರಿನಲ್ಲಿ ಜೆಪಿಎಲ್(ಜನತಾ ಪ್ರೀಮಿರ್ ಲೀಗ್) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.


ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾದ್ಯಕ್ಷ ಹೆಚ್.ನಿಂಗಪ್ಪ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಪಕ್ಷದ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ವರಿಷ್ಠರಾದ ದೇವೇಗೌಡರ ಜನ್ಮದಿನ ಆಚರಣೆ ಗೌರವಾರ್ಥ ಏರ್ಪಡಿಸಿರುವ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿ ಯುವಕರಲ್ಲಿ ಉತ್ಸಾಹತುಂಬಿ ಪಕ್ಷ ಸಂಘಟನೆಗೆ ಸಹಾಯವಾಗುತ್ತದೆ. ಜಿಲ್ಲೆಯ ಕಲ್ಪತರು ನಾಡು ಕ್ರಿಕೆಟರ್ಸ್ ತಂಡ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ತಂಡ ಜಯಗಳಿಸಲಿ ಎಂದು ಶುಭ ಕೋರಿದರು.


ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ರಾಜ್ಯ ಎಸ್.ಟಿ. ಘಟಕ ಉಪಾಧ್ಯಕ್ಷ ಸೋಲಾರ್‌ಕೃಷ್ಣಮೂರ್ತಿ, ನಗರಾಧ್ಯಕ್ಷ ಟಿ.ಹೆಚ್. ಜಯರಾಮ್, ನಗರಸಭೆ ಮಾಜಿ ಸದಸ್ಯರಾದ ಟಿ.ಜಿ. ನರಸಿಂಹರಾಜು, ಮೋಹನ್‌ಕುಮಾರ್, ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್, ರಾಧಾ ಎಲ್. ಗೌಡ, ಹರ್ಷ ದಳಪತಿ, ಹರೀಶ್‌ಗೌಡ, ದಿವಾಕರ್, ಪ್ರತಾಪ್, ಲಕ್ಷ್ಮೀನರಸಿಂಹ ಮತ್ತಿತರರು ಉಪಸ್ಥಿತರಿದ್ದರು.