Home ಜಿಲ್ಲೆ ತುಮಕೂರು ಜಾನುವಾರುಗಳಿಗೆ ಮೇವು ವಿತರಿಸಿದ ಜಪಾನಂದಜೀ

ಜಾನುವಾರುಗಳಿಗೆ ಮೇವು ವಿತರಿಸಿದ ಜಪಾನಂದಜೀ

ಪಾವಗಡ, ಮೇ ೧೧- ಮೇವಿನ ಅಭಾವದ ಸಮಯದಲ್ಲಿ ಮೇವು ವಿತರಣಾ ಕೇಂದ್ರ ನಡೆಸುವ ಮೂಲಕ ರಾಜ್ಯದಲ್ಲಿ ಏಕೈಕ ವಿತರಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾವಗಡ ತಾಲ್ಲೂಕು ಹೆಸರುವಾಸಿಯಾಗಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ್ ಮಹಾರಾಜ್ ತಿಳಿಸಿದ್ದಾರೆ.


ಮೇವು ವಿತರಣಾ ಕೇಂದ್ರ ತುಮಕೂರು ಜಿಲ್ಲೆ ಅಲ್ಲದೆ ಐದು ಜಿಲ್ಲೆಗಳಲ್ಲಿ ಮೇವು ವಿತರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.


ಕಳೆದ ೩೫ ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರು, ಪೌಷ್ಟಿಕ ಆಹಾರ ಮುಂತಾದವುಗಳನ್ನು ಹಸುಗಳಿಗೆ, ಎತ್ತುಗಳಿಗೆ ಸೇರಿದಂತೆ ಮೂಕ ಪ್ರಾಣಿಗಳಿಗೆ ನೀಡುತ್ತಿರುವುದು ಯಾವ ಸರ್ಕಾರಗಳು ಮಾಡದ ಮಹತ್ಕಾರ್ಯವನ್ನು ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ನಡೆಸುತ್ತಿರುವುದು ಅಭಿನಂದನೀಯ.


ದೂರದ ಊರಿನಿಂದ ಸರಿ ಸುಮಾರು ೬೦೦ಕ್ಕೂ ಹೆಚ್ಚು ಗೋಪಾಲಕರು, ರೈತ ಬಾಂಧವರು ಹೈನುಗಾರಿಕೆಯನ್ನೇ ನಂಬಿದವರಿಗೆ ಮೇವು ವಿತರಿಸುತ್ತಿರುವ ಸ್ವಾಮಿ ಜಪಾನಂದ ಮಹಾರಾಜರು ಇದುವರೆಗೂ ೩೦೦ ಟನ್‌ಗೂ ಮಿಗಿಲಾದ ಮೇವು, ೫೦ ಟನ್ ಪೌಷ್ಟಿಕ ಆಹಾರ, ಸುಮಾರು ೧೦,೦೦೦ಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಆಪತ್ಬಾಂಧವರಾಗಿ ಶ್ರೀ ರಾಮಕೃಷ್ಣ ಸೇವಾಶ್ರಮ ಈ ಭಯಂಕರ ಬಿಸಿಲಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಮೂಕ ಪ್ರಾಣಿಗಳ ಮೇಲೆ ಸ್ವಾಮೀಜಿಯವರಿಗೆ ಕಾಳಜಿಯನ್ನು ಎತ್ತಿ ತೋರಿಸುತ್ತದೆ.