Home ಜಿಲ್ಲೆ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಅಗತ್ಯ

ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಅಗತ್ಯ

ಗದಗ,ನ೫: ಕನ್ನಡದ ಕಂಪು ನಾಡಿನ ಎಲ್ಲಡೆ ಪಸರಿಸಬೇಕು. ಕನ್ನಡ ಭಾಷೆ, ನೆಲ, ಜಲ, ಸಂಸ್ಕöÈತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ದಿನವೂ ನಡೆಯಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್.ಶಿರಹಟ್ಟಿ ಅಭಿಪ್ರಾಯಪಟ್ಟರು.


ನಗರದ ಸ್ವತಂತ್ರ ವಿತರಣಾ ಕೇಂದ್ರದಲ್ಲಿ ಸೋಮವಾರ ಗದಗ ಮನರಂಜನಾ ಕೂಟ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡು ಏಕೀಕರಣಕ್ಕೆ ಆಲೂರು ವೆಂಕಟರಾವ್, ಬಿ.ಎಂ.ಶ್ರೀ, ಕುವೆಂಪು ಮುಂತಾದ ಮಹನೀಯರ ತ್ಯಾಗ ಮತ್ತು ಪರಿಶ್ರಮ ಬಗೆಗೆ ಪ್ರತಿಯೊಬ್ಬ ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ, ಗೌರವ ಮತ್ತು ಜಾಗೃತಿ ಮೂಡಿಸುವ ಮೂಲಕ ರಾಜ್ಯೋತ್ಸವ ನಿಜವಾದ ಅರ್ಥದಲ್ಲಿ ಕನ್ನಡಮಯವಾಗಬೇಕು. ರಾಜ್ಯೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಸಂಸ್ಕöÈತಿ, ಕಲೆ ಹಾಗೂ ನಾಡಿಗೆ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಅರ್ಥಪೂರ್ಣ ದಿನವಾಗಬೇಕು ಎಂದರು.


ಕರ್ನಾಟಕ ಏಕೀಕರಣಕ್ಕೂ ಮುನ್ನ ಕನ್ನಡ ಭಾಷಿಕ ಪ್ರದೇಶಗಳು ಐದು ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಇಂತಹ ಸಂದರ್ಭದಲ್ಲಿ ಕನ್ನಡಿಗರ ಹೋರಾಟ, ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಈ ಐತಿಹಾಸಿಕ ಹಿನ್ನೆಲೆಯನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.


ಕನ್ನಡ ನಾಡು ಸಾಹಿತ್ಯ, ಸಂಸ್ಕöÈತಿ, ಕಲೆ, ವಿಜ್ಞಾನ, ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದೆ. ದೇಶದ ಹಲವು ಕ್ಷೇತ್ರಗಳಲ್ಲಿ ಪ್ರಥಮ ಸಾಧನೆ ಮಾಡಿದ ಕನ್ನಡಿಗರ ಹೆಮ್ಮೆಯ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹನೀಯರ ಸ್ಮರಣೆ, ಅವರ ಆದರ್ಶಗಳ ಪರಿಚಯ ಹಾಗೂ ಕನ್ನಡದ ಹಿರಿಮೆಯನ್ನು ಸಾರುವ ಕಾರ್ಯಕ್ರಮಗಳು ರಾಜ್ಯೋತ್ಸವದ ಅವಿಭಾಜ್ಯ ಅಂಗವಾಗಬೇಕು ಎಂದರು.


ಇದೇ ವೇಳೆ ಅಂಚೆ ಅಧೀಕ್ಷಕರು “ಕರುನಾಡು ತಾಯಿ ಸದಾ ಚಿನ್ಮಯಿ, ಈ ಪುಣ್ಯಭೂಮಿ ನಮ್ಮ ದೇವಾಲಯ” ಎಂಬ ಜನಪ್ರಿಯ ಚಿತ್ರಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಅವರ ಗಾಯನಕ್ಕೆ ಸಭಿಕರಿಂದ ಮೆಚ್ಚುಗೆಯ ಕರತಾಡನ ವ್ಯಕ್ತವಾಯಿತು. ಈ ಮೂಲಕ ಅವರು ನೆರೆದಿದ್ದವರನ್ನು ರಂಜಿಸಿ, ಕಾರ್ಯಕ್ರಮದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಗದಗ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವಿನೋಧಕುಮಾರ ಮೇದಾರ, ಐಪಿಪಿಬಿ ಮ್ಯಾನೇಜರ್ ಮಂಜುನಾಥ, ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆ ಪಾಲಕ ಏಕನಾಥ ಮೆಣನಸಿನಕಾಯಿ, ಸ್ವತಂತ್ರ ವಿತರರಣಾ ಕೇಂದ್ರ ಮೇಲ್ವಿಚಾರಕ ಡಿ.ಜಿ.ಮ್ಯಾಗೇರಿ ಮಾತನಾಡಿದರು. ಶರಣಪ್ಪ ನಾಯ್ಕರ, ಸೌಮ್ಯ ಹುಯಿಲಗೋಳ , ವಿನೂತ ಕಪ್ಪತನವರ, ಕವಿತಾ ರಡ್ಡೆರ, ವಿರೇಶ ಅಂಗಡಿ, ಮೇಘನಾ ಕುಲಕರ್ಣಿ,ವಾಣಿ ಯಳಗಂಟಿ, ಭೀಮಣ್ಣ ದೊಡ್ಡಮನಿ, ರವಿ ಜಾಧಚ, ವೀರಣಗೌಡ ಸಂಗೀತ ಸ್ಪರ್ಧೆ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇದೇ ವೇಳೆ ಇಂಡಿಯಾ ಫೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯಾಪಾರಿ ಗ್ರಾಹಕರಿಗಾಗಿ ಡಿಜಿಟಲ್ ಪಾವತಿಗಾಗಿ ಡಕ್ ಪೇ ಸೌಂಡ್ ಬಾಕ್ಸ್ ವಿತರಣೆ ಮಾಡಲಾಯಿತು.


ಪ್ರಧಾನ ಅಂಚೆ ಕಚೇರಿ ಹಾಗೂ ಐಡಿಸಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೆAಕಟೇಶ ಆಕಳವಾಡಿ ನಿರೂಪಿಸಿದರು, ಸೋಮು ಎಸ್ ಸ್ವಾಗತಿಸಿ, ವಂದಿಸಿದರು.