Home ಮುಖಪುಟ ಸುದ್ದಿ ಬಾಹ್ಯಾಕಾಶದಲ್ಲಿ ಭಾರತದ ಹೆಜ್ಜೆ ನಮ್ಮ ಗುರಿ

ಬಾಹ್ಯಾಕಾಶದಲ್ಲಿ ಭಾರತದ ಹೆಜ್ಜೆ ನಮ್ಮ ಗುರಿ

ನವದೆಹಲಿ, ಅ.೭- ೨೦೪೭ರ ವೇಳೆಗೆ ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ರೂಪಿಸುವುದಾಗಿ ದೃಢ ಸಂಕಲ್ಪ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಒಲಿಂಪಿಕ್ಸ್ ಆಯೋಜಿಸುತ್ತೇವೆ, ಬಾಹ್ಯಾಕಾಶದಲ್ಲಿ ಭಾರತದ ಹೆಜ್ಜೆ ಗುರುತನ್ನು ಮಾಡಿಯೇ ತೀರುತ್ತೇವೆ. ಭಾರತವನ್ನು ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸಬೇಕು. ದೇಶದ ಉತ್ಪಾದನಾ ಕೇಂದ್ರವಾಗಿ ಬದಲಾಗಬೇಕು.ಎಂದ ಅದಮ್ಯ ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.


ತಮ್ಮ ಸಾರ್ವಜನಿಕ ಜೀವನದ ೨೫ ವಂಸತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿಂದು ನಡೆದ
ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿ ಅವರು,ಈ ೨೫ ವರ್ಷಗಳ ಮೈಲಿಗಲ್ಲು ಕೇವಲ ಹಬ್ಬದ ಆಚರಣೆಯಲ್ಲ, ಬದಲಿಗೆ ಮುಂದಿನ ಗುರಿಗಳನ್ನು ತಲುಪಲು ಪ್ರೇರಣೆಯಾಗಿದೆ ಎಂದು ಪ್ರತಿಪಾದಿಸಿದರು.


ತಮ್ಮ ರಾಜಕೀಯ ಮತ್ತು ಸಾರ್ವಜನಿಕ ಬದುಕಿನಲ್ಲಿ ಎದುರಾದ ಟೀಕೆಗಳು ಹಾಗೂ ವಿರೋಧಗಳಿಂದ ತಾವು ಹಲವು ಪಾಠಗಳನ್ನು ಕಲಿತಿರುವುದಾಗಿ ಹೇಳಿದರು.
ನನ್ನನ್ನು ವಿರೋಧಿಸಿದವರು ಪ್ರಜಾಪ್ರಭುತ್ವದ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದರು. ನನ್ನ ಟೀಕಾಕಾರರು ನನ್ನೊಳಗೆ ನಾನು ನೋಡಿಕೊಳ್ಳುವಂತೆ ಮಾಡಿದರು ಎಂದು ಅವರು ವಿವರಿಸಿದರು.


ತಮ್ಮ ಜೀವನದ ವಿವಿಧ ಘಟನೆಗಳು ತಮಗೆ ಕಲಿಸಿದ ಪಾಠಗಳನ್ನು ನೆನಪಿಸಿಕೊಂಡ ಅವರು, ೨೦೦೧ರ ಭುಜ್ ಭೂಕಂಪವು ಪುನರ್‌ನಿರ್ಮಾಣದ ಸಂದರ್ಭದಲ್ಲಿ ದೃಢವಾಗಿ ನಿಲ್ಲುವುದನ್ನು ಕಲಿಸಿತು ಎಂದರು.


ಚಂದ್ರಯಾನ ಯೋಜನೆಯು ವೈಫಲ್ಯದಿಂದ ಎದ್ದು ಮತ್ತೆ ಮುನ್ನಡೆಯುವ ಪಾಠ ಕಲಿಸಿತು. ಕೋವಿಡ್-೧೯ ಸಾಂಕ್ರಾಮಿಕ ರೋಗವು ದೇಶದ ಸಾಮೂಹಿಕ ಸಂಕಲ್ಪ ಮತ್ತು ಒಗ್ಗಟ್ಟಿನ ಮಹತ್ವವನ್ನು ಸಾರಿತು ಎಂದು ನುಡಿದರು.


ತಮ್ಮ ಅನುಭವಗಳಲ್ಲಿ ಮಾಧ್ಯಮವೂ ಪ್ರಮುಖ ಪಾತ್ರ ವಹಿಸಿದೆ.“ಸಿಹಿ-ಕಹಿ ಅನುಭವಗಳ ನಡುವೆಯೂ ಮುಂದೆ ಸಾಗಲು ಮಾಧ್ಯಮ ನನಗೆ ಪ್ರೇರಣೆ ನೀಡಿದೆ ಎಂದರು.


‘ಜನರೇ ನನಗೆ ದೇವರು’


ತಮ್ಮ ಸಾರ್ವಜನಿಕ ಸೇವೆಯ ಪಯಣದ ಕುರಿತು ಮಾತನಾಡಿದ ಮೋದಿ, ತಮಗೆ ವಹಿಸಲಾಗಿರುವ ಪ್ರತಿಯೊಂದು ಜವಾಬ್ದಾರಿಯೂ ಜನರು ಇಟ್ಟಿರುವ ನಂಬಿಕೆಯಿಂದ ಬಂದಿದೆ ಎಂದು ತಿಳಿಸಿದರು.


“ನನ್ನ ದೇಶಕ್ಕಾಗಿ ಇನ್ನಷ್ಟು ಶಕ್ತಿ ಮತ್ತು ಉತ್ಸಾಹದಿಂದ ಹಗಲಿರುಳು ಸೇವೆ ಸಲ್ಲಿಸಲು ದೇವರು ನನಗೆ ಶಕ್ತಿ ನೀಡಲಿ. ನಾನು ಇಂದು ಏನಾಗಿದ್ದೇನೆ, ಎಲ್ಲಿದ್ದೇನೆ ಮತ್ತು ಯಾವ ಜವಾಬ್ದಾರಿ ಹೊಂದಿದ್ದೇನೆ ಎಂಬುದೆಲ್ಲ ಜನರಿಂದಲೇ. ನನಗೆ ಜನರೇ ದೇವರು” ಎಂದು ಮೋದಿ ಗುಣಗಾನ ಮಾಡಿದರು.


ದೇಶ ತಮ್ಮ ಮೇಲೆ ಅಪಾರವಾದ ವಿಶ್ವಾಸವಿಟ್ಟಿದ್ದು, ಅದಕ್ಕೆ ತಕ್ಕಂತೆ ದೇಶದ ಮೇಲಿನ ತಮ್ಮ ಜವಾಬ್ದಾರಿಯೂ ದೊಡ್ಡದಾಗಿದೆ ಎಂದರು.

ದೇಶ ಸೇವೆಗೆ ಇನ್ನಷ್ಟು ಶಕ್ತಿ ನೀಡಲಿ’

ದಿನದ ಆರಂಭದಲ್ಲಿ ವಿನಾಯಕ ದೇವಸ್ಥಾನದಲ್ಲಿ ದೇಶ ಮತ್ತು ದೇಶದ ಜನರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಮೋದಿ ಹೇಳಿದರು. ಇನ್ನಷ್ಟು ಶಕ್ತಿಯಿಂದ ದೇಶಕ್ಕೆ ಸೇವೆ ಸಲ್ಲಿಸಲು ಅಗತ್ಯವಾದ ಸಾಮರ್ಥ್ಯವನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಕೆಂಪುಕೋಟೆಯಿಂದ ತಾವು ಈ ಹಿಂದೆ ಮಾತನಾಡುವಾಗ ಸಾಮೂಹಿಕ ಪ್ರಯತ್ನದ ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ್ದನ್ನು ಮೋದಿ ಸ್ಮರಿಸಿದರು. “ನಾವು ಇದನ್ನು ಸಾಧಿಸುತ್ತೇವೆ” ಎಂದು ಹೇಳುವ ಮೂಲಕ ರಾಷ್ಟ್ರೀಯ ಸಂಕಲ್ಪಕ್ಕೆ ಮತ್ತೊಮ್ಮೆ ಕರೆಕೊಟ್ಟರು.

ನಾನು ಇನ್ನೂ ವಿದ್ಯಾರ್ಥಿ

ತಮ್ಮ ಕಲಿಕೆಯ ಮನೋಭಾವದ ಬಗ್ಗೆಯೂ ಪಮಾತನಾಡಿದ ಅವರು,. ಶಾಲಾ ದಿನಗಳಲ್ಲಿ ತರಗತಿಗೆ ಮೊದಲಿಗರಾಗಿ ತಲುಪುತ್ತಿದ್ದುದನ್ನು ನೆನಪು ಮಾಡಿಕೊಂಡರು.ಕಲಿಯುವ ಉತ್ಸಾಹ ತಮ್ಮ ಜೀವನದ ಭಾಗವಾಗಿದೆ ಎಂದರು.


“ಇಂದಿಗೂ ನಾನು ನನ್ನನ್ನು ವಿದ್ಯಾರ್ಥಿ ಎಂದೇ ಪರಿಗಣಿಸುತ್ತೇನೆ. ನಾನು ಎಷ್ಟು ಹೆಚ್ಚು ಕಲಿಯುತ್ತೇನೆಯೋ, ದೇಶಕ್ಕಾಗಿ ಏನಾದರೂ ಮಾಡುವ ನನ್ನ ಸಾಮರ್ಥ್ಯವೂ ಅಷ್ಟೇ ಹೆಚ್ಚಾಗುತ್ತದೆ” ಎಂದು ಹೇಳಿದರು.


ಟೀಕೆಗಳು ಕೂಡ ತಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಹಾಯ ಮಾಡಿವೆ ಎಂದು ಮೋದಿ ತಿಗುರುತನ್ನುಮೋದಿ ೫ ಸಂಕಲ್ಪ ಕೈಗೊಂಡರು. ೨೦೪೭ರ ವೇಳೆಗೆ ವಿಕಸಿತ ಭಾರತವಾಗಬೇಕು.