
ಮೋದಿಗೆ ಟ್ರಂಪ್ ಪ್ರಶಂಸೆ
ನವದೆಹಲಿ,ಜೂ.೫- ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕದ ನಡುವೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದಕ್ಕೆ ಬರಲಿವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಜೂನ್ ೧ ರಿಂದ ಜೂನ್ ೪ ರವರೆಗೆ ದೆಹಲಿಯಲ್ಲಿ ನಾಲ್ಕು ದಿನಗಳ ವ್ಯಾಪಾರ ಮಾತುಕತೆಗಳನ್ನು ಮುಕ್ತಾಯಗೊಳಿಸಿದ ಬೆನ್ನಲ್ಲೆ ಈ ಹೇಳಿ ಬಂದಿದೆ
ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ವ್ಯಾಪಾರ ಅಸಮತೋಲನದಿಂದ ಭಾರತ ವರ್ಷಗಳಿಂದ ಲಾಭ ಪಡೆದಿತ್ತು, ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ
ಎರಡೂ ದೇಶಗಳ ಮುಖ್ಯ ಸಮಾಲೋಚಕರ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಕಚೇರಿಯ ಅಧಿಕಾರಿಗಳು, ಸರಕುಗಳ ವ್ಯಾಪಾರ, ಕಸ್ಟಮ್ಸ್ ಕಾರ್ಯವಿಧಾನಗಳು, ವ್ಯಾಪಾರ ಸೌಲಭ್ಯ, ಸುಂಕ ರಹಿತ ಅಡೆತಡೆಗಳು ಮತ್ತು ಆರ್ಥಿಕ ಭದ್ರತಾ ಸಹಕಾರದಂತಹ ವಿಷಯಗಳ ಕುರಿತು ಭಾರತೀಯ ಸಹವರ್ತಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
ಎರಡೂ ಕಡೆಯವರು ಮಾತುಕತೆಗಳನ್ನು ರಚನಾತ್ಮಕವೆಂದು ಬಯಸಿದ್ದಾರೆ. ಪರಸ್ಪರ ಪ್ರಯೋಜನಕಾರಿ ಮಧ್ಯಂತರ ವ್ಯಾಪಾರ ಒಪ್ಪಂದ ತೀರ್ಮಾನಿಸಲು ಪ್ರಯತ್ನಗಳು ನಡೆಯುತ್ತಿವೆ, ಆದರೆ ವಿಶಾಲವಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಸಮಾನಾಂತರವಾಗಿ ಮುಂದುವರಿಯುತ್ತಿವೆ ಎಂದು ತಿಳಿಸಿದ್ದಾರೆ
“ನನಗೆ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಇಷ್ಟ. ಅವರು ನನ್ನ ಒಳ್ಳೆಯ ಸ್ನೇಹಿತ, ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತೇವೆ ಜೊತೆಗೆ ನಮ್ಮ ನಡುವೆ ಉತ್ತಮ ಸಂಬಂಧವಿದೆ” ಎಂದು ತಿಳಿಸಿದ್ದಾರೆ
“ವರ್ಷಗಳ ಕಾಲ ಭಾರತ, ಅಮೆರಿಕ ಸಂಯುಕ್ತ ಸಂಸ್ಥಾನದ ಲಾಭ ಪಡೆದುಕೊಂಡಿದೆ. ಭಾರತ ,ಅಮೇರಿಕಾದ ಉತ್ಪನ್ನಗಳ ಮೇಲೆ ಅಪಾರ ಸುಂಕ ವಿಧಿಸಿತ್ತು ಮತ್ತು ಏನನ್ನೂ ಪಾವತಿಸಲಿಲ್ಲ. ಈಗ ಅದು ನಿಖರವಾಗಿ ವಿರುದ್ಧವಾಗಿದೆ ಮತ್ತು ನಾವೂ ಭಾರತದೊಂದಿಗೆ ಬಹಳಷ್ಟು ಹಣ ಗಳಿಸುತ್ತಿದ್ದೇವೆ. ಆದರೆ ಒಂದು ಒಪ್ಪಂದಕ್ಕೆ ಬರುತ್ತೇವೆ” ಎಂದು ಅವರು ಹೇಳಿದ್ದಾರೆ
ಆರ್ಥಿಕ ಸಂಬಂಧ ಬಲಪಡಿಸಲು ಮತ್ತು ದೀರ್ಘಕಾಲದ ವ್ಯಾಪಾರ ಸಮಸ್ಯೆ ಪರಿಹರಿಸಲು ಎರಡೂ ದೇಶಗಳು ನಡೆಸುತ್ತಿರುವ ಪ್ರಯತ್ನಗಳ ನಡುವೆ ಈ ಹೇಳಿಕರ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಮಾತನಾಡಿ, ಮಾತುಕತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ, ಸೀಮಿತ ಸಂಖ್ಯೆಯ ಸಮಸ್ಯೆಗಳು ಮಾತ್ರ ಇನ್ನೂ ಬಗೆಹರಿಯುತ್ತಿಲ್ಲ ಎಂದಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಇದೇ ರೀತಿ ಹೆಚ್ಚಿನ ವಿಷಯಗಳು ಇತ್ಯರ್ಥಗೊಂಡಿವೆ ಒಪ್ಪಂದದ ಮೊದಲ ಹಂತವನ್ನು ಅನಾವರಣಗೊಳಿಸುವ ಮೊದಲು ಉಳಿದ ವಿವರಗಳನ್ನು ಅಂತಿಮಗೊಳಿಸುವತ್ತ ಚರ್ಚೆಗಳು ಈಗ ಕೇಂದ್ರೀಕೃತವಾಗಿವೆ ಎಂದಿದ್ದಾರೆ.




























