Home ಜಿಲ್ಲೆ ಕಲಬುರಗಿ ಸ್ವಚ್ಛ ಕಲಬುರಗಿ ನಮ್ಮ ಕನಸು

ಸ್ವಚ್ಛ ಕಲಬುರಗಿ ನಮ್ಮ ಕನಸು

ಕಲಬುರಗಿ: ನಮ್ಮ ಕಲಬುರಗಿ ನಗರದಲ್ಲಿ ಒಳಚರಂಡಿ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸರಕಾರಿ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಎದುರು ರಸ್ತೆ ಸಂಪೂರ್ಣ ಹಾಳಾಗಿದೆ. ದತ್ತ ನಗರ ರೈಲ್ವೆ ಸೇತುವೆ ಕೆಳಗೆ, ಕೋಟೆ ಕಂದಕದ ಕೊಳಚೆ ನೀರಿನಲ್ಲಿ ಎಮ್ಮೆಗಳು ಈಜಾಡುತ್ತಿವೆ.
ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಪ್ರತಿ ಬಡಾವಣೆಯಲ್ಲಿ ಉದ್ಯಾನವನ ನಿರ್ಮಿಸಿ, ಗಿಡ ಬೆಳೆಸಬೇಕು. ಹಿರಿಯರಿಗೆ ವಾಯು ವಿಹಾರ, ಮಕ್ಕಳಿಗೆ ಆಟದ ಮೈದಾನ ಮಾಡಿಕೊಡಬೇಕು. ಶುದ್ಧ ಕುಡಿಯುವ ನೀರು, ಒಳ್ಳೆಯ ರಸ್ತೆ, ಪಾದಚಾರಿ ದಾರಿ, ಸಾರ್ವಜನಿಕ ಶೌಚಾಲಯ ಇವು ನಾಗರಿಕರ ಮೂಲಭೂತ ಹಕ್ಕು.
ಜೂನ್ 5 ವಿಶ್ವ ಪರಿಸರ ದಿನದ ಸಂಕಲ್ಪ: ಗಾಂಧೀಜಿಯವರ ಕನಸಿನಂತೆ “ಸ್ವಚ್ಛ ಭಾರತ – ಸ್ವಚ್ಛ ಕಲಬುರಗಿ” ನಿರ್ಮಿಸೋಣ. ಅಧಿಕಾರಿಗಳು ಹಾಗೂ ನಾಗರಿಕರೆಲ್ಲರೂ ಕೈಜೋಡಿಸೋಣ.