Home ಜಿಲ್ಲೆ ಶಾಲೆಗಳ ವಿಲೀನಕ್ಕೆ ಗ್ರಾಮಸ್ಥರ ವಿರೋಧ

ಶಾಲೆಗಳ ವಿಲೀನಕ್ಕೆ ಗ್ರಾಮಸ್ಥರ ವಿರೋಧ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜೂ.05: ಇಂದು ಎ ಐ ಡಿ ಎಸ್ ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ತಾಲ್ಲೂಕಿನ ಚಾಣಕನೂರು, ಬಗ್ಗೂರು, ಬಾಗೇವಾಡಿ ಕ್ಯಾಂಪ್ ಮತ್ತು ಸಾಲಿಗನೂರು ಗ್ರಾಮಗಳಲ್ಲಿ ಪ್ರತಿಭಟನೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ  ಜಿಲ್ಲಾ ಉಪಾಧ್ಯಕ್ಷರಾದ ಗುರಳ್ಳಿ ರಾಜ ಮಾತನಾಡುತ್ತಾ ಕರ್ನಾಟಕ ಸರ್ಕಾರ ಹೊಸದಾಗಿ ಮಾಡಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್  ಶಾಲೆಗೆ ಸುತ್ತಲಿನ ಹಳ್ಳಿಗಳ ಶಾಲೆಗಳನ್ನು ವಿಲೀನ ಮಾಡುವ ಉದ್ದೇಶವನ್ನು ಹಳ್ಳಿಯ ಗ್ರಾಮಸ್ಥರು ತೀವ್ರವಾಗಿ ವಿರೋಧಿಸುತ್ತಿದ್ದಾರೆ, ಹಾಗಾಗಿ ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈ ಬಿಡಬೇಕು ಎಂದು ತಿಳಿಸಿದರು.

ಏ ಐ ಯು ಟಿ ಯು ಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ಸುರೇಶ್ ಅವರು ಮಾತನಾಡುತ್ತಾ ಸಾರ್ವಜನಿಕರು ತಮ್ಮ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚಿ ಮತ್ತೊಂದು ಊರಿನ ಕೆಪಿಎಸ್ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಸಾದ್ಯವಿಲ್ಲ,  ಸರ್ಕಾರದ ಈ ಆದೇಶ ಹಿಂತೆಗೆದುಕೊಳ್ಳುವವರೆಗೂ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ಕೆ. ಮರೆಪ್ಪ, ಉ.ಈರಪ್ಪ, ಪಕ್ಕಿರಪ್ಪ, ವಿರೂಪಣ್ಣ, ಭೀಮನ ಗೌಡ, ಗುರುಸಿದ್ದನ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು