Home ಮುಖಪುಟ ಸುದ್ದಿ ಹೊಸ ಪಕ್ಷ ಘೋಷಿಸಿದ ಅಣ್ಣಾಮಲೈ

ಹೊಸ ಪಕ್ಷ ಘೋಷಿಸಿದ ಅಣ್ಣಾಮಲೈ

ಚೆನ್ನೈ,ಜೂ.೫- ಬಿಜೆಪಿಗೆ ರಾಜೀನಾಮೆ ನೀಡಿರುವ ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಈ ನೂತನ ಪಕ್ಷP” ನಾವು ಜನರು” ಎಂಬ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಕೆ. ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ”

ಅಣ್ಣ ಮಲೈ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟ ಆಗುವುದಿಲ್ಲ ,ಕಾರ್ಯಕರ್ತರಿದ್ದಾರೆ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ

ಪಕ್ಷದ ಮಾಜಿ ರಾಜ್ಯಾದ್ಯಕ್ಷ ಕೆ. ಅಣ್ಣಾ ಮಲೈ ನೀಡಿರುವ ರಾಜೀನಾಮೆಯನ್ನು ಬಿಜೆಪಿ ಅಂಗೀಕಾರ ಮಾಡಿದೆ. ತಮಿಳುನಾಡಿನಲ್ಲಿ ಬಿಜೆಪಿಯ ನಾಯಕ ಕೆ ಅಣ್ಣಾಮಲೈ ಅವರು ಬಿಜೆಪಿಯನ್ನು ತೊರೆದಿರುವುದು ಹಲವು ದಿನಗಳ ನಡೆಯುತ್ತಿದ್ದ ಸಸ್ಪೆನ್ಸ್ ಕೊನೆಗೊಂಡಿದೆ.

೪೧ ವರ್ಷದ ನಾಯಕ ಅಣ್ಣಾ ಮಲೈ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಅವರನ್ನು ಭೇಟಿಯಾಗಿ, ರಾಜೀನಾಮೆ ನೀಡುವ ವಿಷಯ ತಿಳಿಸಿದ್ದರು.” ನಂತರ ಅಮಿತ್ ಶಾ ಅವರನ್ನು ಅಣ್ಣಾಮಲೈ ಅವರ ಪ್ರತಿಭೆಯನ್ನು ಗುರುತಿಸಿದ ಕೀರ್ತಿಗೆ ಪಾತ್ರರಾದ ಬಿ.ಎಲ್. ಸಂತೋಷ್ ಅವರೊಂದಿಗೆ ಸಭೆ ನಡೆಸಿದ ನಂತರ ರಾಜೀನಾಮೆ ಸಲ್ಲಿಸಿದ್ದರು.

ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಅವರನ್ನು ದೆಹಲಿಗೆ ಕರೆಸಿಕೊಂಡು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಗಿತ್ತು. ಅದರೂ ಅಣ್ಣಾ ಮಲೈ ತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ ರಾಜೀನಾಮೆಯನ್ಮು ಅಂಗೀಕಾರ ಮಾಡಿದೆ.
.
ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಪ್ರತಿಕ್ರಿಯಿಸಿ ಅಣ್ಣಾಮಲೈ ಅವರ ರಾಜೀನಾಮೆ ಪಕ್ಷಕ್ಕೆ “ಯಾವುದೇ ನಷ್ಟವಿಲ್ಲ” ಎಂದು ಘೋಷಿಸಿದ್ದಾರೆ.

ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲು ಸಿದ್ದತೆ ನಡೆಸಿದ್ದು ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಉದ್ದೇಶಿಸಿದ್ದಾರೆ.

ತಮಿಳುನಾಡು ಬಿಜೆಪಿ ಘಟಕದಲ್ಲಿ ಕಡೆಗಣಿಸಲ್ಪಟ್ಟಿದ್ದ ಕೆ. ಅಣ್ಣಾ ಮಲೈ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.

ಈ ಕುರಿತು ಸಾಮಾಜಿಕ ಮಾದ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಸಾರ್ವಜನಿಕರನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಾಗಿ ಮತ್ತು ತಮ್ಮ ಮುಂದಿನ ಕ್ರಮದ ಬಗ್ಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ

ಅಣ್ಣಾ ಮಲೈ ರಾಜೀನಾಮೆ ಅವರ ರಾಜಕೀಯ ಯೋಜನೆಗಳ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿತು,ಅವರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳನ್ನು ಬಿಜೆಪಿ ನಾಯಕರು ಈ ಹಿಂದೆ ತಳ್ಳಿಹಾಕಿದ್ದರು. ಪಕ್ಷದ ನಾಯಕರು ಅವರನ್ನು ಬಿಜೆಪಿಯಲ್ಲಿ ಮುಂದುವರಿಯುವಂತೆ ಒತ್ತಾಯಿಸಿದ್ದರು. ಯಾರ ಮಾತಿಗೂ ಮಣೆ ಹಾಕದೆ ರಾಜೀನಾಮೆ ನೀಡಿದ್ದಾರೆ.