
ಹುಬ್ಬಳ್ಳಿ,ಆ.೧೬: ಸಿ.ಬಿ.ಟಿ. ಕಿಲ್ಲಾದಲ್ಲಿ ಸರಕಾರಿ ಮರಾಠಿ ಶಾಲೆಯಲ್ಲಿ ಸ್ವಾತಂತ್ರೊ÷್ಯÃತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಮುಖಂಡರಾದ ವಾದಿರಾಜ್ ಕುಲಕರ್ಣಿ ಯವರು ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳಾಗಿ ಉತ್ತಮ ನಾಗರಿಕರಾಗಿ ವಿದ್ಯಾವಂತರಾಗಿ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳಿಗೆ ಅಮೀತ ಮಹಾಜನ ಸಿಹಿ ಹಂಚಿದರು. ಮಕ್ಕಳಿಂದ ಭಾಷಣ, ಭಕ್ತಿ ಗೀತೆ, ನೃತ್ಯ ಕಾರ್ಯಕ್ರಮ ನಡೆಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರೇಖಾ ಜೋಶಿ ದೇಶ ಭಕ್ತಿ ಗೀತೆಯನ್ನು ಹಾಡಿದರು.
ಎಸ್ಡಿಎಮ್ಸಿ ಅಧ್ಯಕ್ಷರು ಹಾಗೂ ಪಾಲಕರು ಶಾಲೆಯ ಮಕ್ಕಳು, ಶಿಕ್ಷಕಿ ಶ್ರೀಮತಿ ಪ್ರಾಜಕ್ತಾ ಕರಿ, ಸವಿತಾ ಭಜಂತ್ರಿ, ಮೋಹನ್ ಮಹಾಜನ, ಸಚೀನ ಕಂಗಳೇಕರ, ಉಮಾ ಬಾರಲೊಣಿ, ಸುಮಾ ಕರಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.































