Home ಜಿಲ್ಲೆ ಬ್ರೀಮ್ಸ್ನಲ್ಲಿ ಅಕ್ರಮ ಸೇವೆ: ವೈದ್ಯರ ವಜಾಗೊಳಿಸಲು ಆಗ್ರಹಬ್ರೀಮ್ಸ್ ನಿರ್ದೇಶಕರು ಮನವಿ ಸ್ವೀಕರಿಸದ ಹಿನ್ನೆಲೆ: ಖಾಲಿ ಕುರ್ಚಿಗೆ...

ಬ್ರೀಮ್ಸ್ನಲ್ಲಿ ಅಕ್ರಮ ಸೇವೆ: ವೈದ್ಯರ ವಜಾಗೊಳಿಸಲು ಆಗ್ರಹಬ್ರೀಮ್ಸ್ ನಿರ್ದೇಶಕರು ಮನವಿ ಸ್ವೀಕರಿಸದ ಹಿನ್ನೆಲೆ: ಖಾಲಿ ಕುರ್ಚಿಗೆ ಮನವಿ ಸಲ್ಲಿಸಿದ ಮುಖಂಡರು

ಬೀದರ :ಮೇ.೪:ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರೀಮ್ಸ್)ಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಫಿಜಿಯಾಲಜಿ ವಿಭಾಗದಲ್ಲಿ ೨೦೦೭ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಜೈಸಿಂಗ್ ಡಿ. (ಟ್ಯೂಟರ್) ಅವರು ಆಡಳಿತ ಮಂಡಳಿಯ ಅನುಮೋದಿತ ಷರತ್ತುಗಳ ಪ್ರಕಾರ ಅಗತ್ಯವಾದ ಪಿಜಿ ಪದವಿಯನ್ನು ಪಡೆಯದೇ ಸೇವೆ ಮುಂದುವರಿಸಿರುವುದು ಸರಕಾರದ ನಿಯಮ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಕುರಿತು ಬ್ರೀಮ್ಸ್ನ ೧೯ನೇ ಆಡಳಿತ ಮಂಡಳಿ ಸಭೆಯಲ್ಲಿ ಅವರ ವಿರುದ್ಧ ನೋಟಿಸ್ ಜಾರಿ ಮಾಡಿ ಅಪರಾಧ ಪ್ರಕರಣ ದಾಖಲಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಲಾಗಿದೆ.

ಅರ್ಹತೆ ಇಲ್ಲದಿದ್ದರೂ ತಪ್ಪು ಮಾಹಿತಿ ನೀಡಿ ಸೇವೆ ಮುಂದುವರಿಸಿರುವುದರ ಜೊತೆಗೆ ಆಡಳಿತ ಕಚೇರಿ ಕಡತಗಳನ್ನು ನೋಡಿಕೊಳ್ಳುವುದು ಮತ್ತು ಸಿಬ್ಬಂದಿಗಳಿಗೆ ಕಿರುಕುಳ ನೀಡುವುದು ಅವರ ದಿನನಿತ್ಯದ ವರ್ತನೆಯಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಹುಜನ ಸೇವಾ ಸಮಿತಿಯ ರಾಜ್ಯ ಮುಖಂಡರಾದ ಸ್ವಾಮಿದಾಸ ಕೆಂಪೆನೋರ, ಜಿಲ್ಲಾ ಸಂಯೋಜಕ ಶಿವರಾಜ ನೆಲವಾಳಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಲ್ಸನ್ ಕುಡ್ತೆನೋರ ಹಾಗೂ ಮುಖಂಡರಾದ ಶ್ರೀನಾಥ ದರ್ಗಾ, ಜೇಮ್ಸ್ ಇಸ್ಲಾಂಪೂರ ಅವರು ಆದರೆ ಬ್ರೀಮ್ಸ್ ನಿರ್ದೇಶಕರಾದ ಡಾ. ಶಾಂತಲಾ ಕೌಜಲಗಿ ಅವರು ಮನವಿ ಸ್ವೀಕರಿಸದ ಹಿನ್ನೆಲೆಯಲ್ಲಿ, ಮುಖಂಡರು ಖಾಲಿ ಕುರ್ಚಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವಾರದೊಳಗಾಗಿ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳದಿದ್ದಲ್ಲಿ ಬ್ರೀಮ್ಸ್ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.