Home ಜಿಲ್ಲೆ ಜೀವವೈವಿಧ್ಯತೆಗಳ ಸಂರಕ್ಷಣೆ ಮಾಡಿದರೆ ನಮಗೆ ಉಳಿಗಾಲ ಶೈಲೇಂದ್ರ ಕಾವಡಿ

ಜೀವವೈವಿಧ್ಯತೆಗಳ ಸಂರಕ್ಷಣೆ ಮಾಡಿದರೆ ನಮಗೆ ಉಳಿಗಾಲ ಶೈಲೇಂದ್ರ ಕಾವಡಿ

ಬೀದರ್ : ಜೂ.1:ಪರಿಸರ ಅಸಮತೋಲನದಿಂದ ಜೀವ ವೈವಿಧ್ಯತೆಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿ ಶೈಲೇಂದ್ರ ಕಾವಡಿ ಬೀದರ್ ತಾಲೂಕಿನ ಚಾಲುಕ್ಯ ಶಿಕ್ಷಣ ಶಿಕ್ಷಣ ಸಂಸ್ಥೆಯಲ್ಲಿ ಪರಿಸರವಾಹಿನಿ ಬೀದರ್ ಹಾಗೂ ರಾಮಾನುಜಂ ಬೇಸಿಗೆ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡಿದ್ದ ಜೀವವೈವಿಧ್ಯತೆ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುವುದು ತಿಳಿಸಿದರು. ವರ್ಷ ವರ್ಷ ಹೆಚ್ಚುತ್ತಿರುವ ಭೂತಾಪಮಾನ ಹೆಚ್ಚಳದಿಂದಾಗಿ ಹಲವಾರು ಜೀವ ವೈವಿಧ್ಯತೆಗಳ ಮೇಲೆ ಪರಿಣಾಮ ಬೀರುತ್ತಿವೆ ಹಲವಾರು ಪ್ರಾಣಿ ಪಕ್ಷಿಗಳು ಕೂಡ ಕಣ್ಮರೆಯಾಗುತ್ತಿವೆ ಎಂದರು. ಪರಿಸರ ಸಮತೋಲನ ಹಾಗೂ ಭೂತಾಪಮಾನ ಕಡಿಮೆ ಮಾಡಿದರೆ ನಮಗೆ ಉಳಿಗಾಲವಿದೆ ಎಂದರು. ಭೂತಾಪಮಾನ ಹೆಚ್ಚಳದಿಂದಾಗಿ ಮುಂಬರುವ ದಿನಗಳಲ್ಲಿ ಪರಾಗ ಸ್ಪರ್ಶದಲ್ಲಿ ಸಹಾಯ ಮಾಡುವ
ಚಿಟ್ಟೆ ಕೂಡ ಕಣ್ಮರೆಯಾಗಲಿವೆ. ಚಿಟ್ಟೆ ಮಾಯಾವದರಿಂದ ಕಾಫಿ ತೋಟದ ಮೇಲೆ ಪರಿಣಾಮ ಪರಿಣಾಮ ಬೀರಲಿದೆ ಹಾಗೂ ಮುಂದಿನ ದಿನಗಳಲ್ಲಿ ಜೇನುತುಪ್ಪ ಕೂಡ ಸಿಗಲಾರದಂತ ಪರಿಸ್ಥಿತಿ ಬರಲಿದೆ ಎಂದು ಕಾವಡಿ ವಿμÁದದಿಂದ ತಿಳಿಸಿದರು. ಪ್ರತಿಯೊಬ್ಬರು ಜೀವ ವೈವಿಧ್ಯತೆಗಳ ಸಂರಕ್ಷಣೆಗೆ ಹಾಗೂ ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಮರಗಿಡ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಮನೆಯಂಗಳದಲ್ಲಿ ಔಷಧೀಯ ಸಸ್ಯಗಳಾದ ತುಳಸಿ ನಲ್ಲಿ ನುಗ್ಗಿ ಗಿಡಗಳನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಮನೆಯಲ್ಲಿ ಹೂವಿನ
ಗಿಡಗಳನ್ನು ಚಾಮ ಇವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು ಬೆಳೆಸಬೇಕೆಂದು ಕರೆ ನೀಡಿದರು. ರಾಮಾನುಜಂ ಕೋಚಿಂಗ್ ಸೆಂಟರ್ ನ ಮುಖ್ಯಸ್ಥರಾದ ಶಿಕ್ಷಕರ ನಾಗೇಶ್ ಚಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬೇಸಿಗೆ ಶಿಬಿರದ ಮಹತ್ವದ ಬಗ್ಗೆ ವಿವರಿಸಿದರು. ನರಸಿಂಗ್ ರಾಜಗಿರ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.