Home ಜಿಲ್ಲೆ ನನ್ನಕನಸು ಸಂವಾದ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಸಂದೀಪ್

ನನ್ನಕನಸು ಸಂವಾದ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಸಂದೀಪ್

ಗುರುಮಠಕಲ್,ನ.6: ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಒಳ್ಳೆಯ ಗುರಿ ಕಾಣಬೇಕು . ಆ ಗುರಿಯು ನೀವು ರಾತ್ರಿ ಮಲಗಿರುವಾಗ ಕನಸಿನಲ್ಲಿಯು ಕೂಡ ಆ ಗುರಿಯು ನಿಮ್ಮನ್ನು ಕಾಡುವಂತಿರಬೇಕು. ನೀವೆಲ್ಲರು ನಿಮ್ಮ ಸ್ವಂತ ಸಾಮಥ್ರ್ಯದ ಮೇಲೆ ಮತ್ತು ನಂಬಿಕೆ ಇಟ್ಟುಕೊಂಡು ಗುರು ಹಿರಿಯರು ಹಾಗೂ ನಿಮಗೆ ಶಾಲೆಯಲ್ಲಿ ಭೋಧನೆ ಮಾಡುವಂತಹ ಶಿಕ್ಷಕರು ಹೇಳುವಂತಹ ವಿಷಯಗಳ ಮೇಲೆ ಏಕಾಗ್ರತೆ ವಹಿಸಿ, ವಿಷಯಗಳನ್ನು ಅಥಮಾಡಿ ಕೊಳ್ಳುವದರ ಜೊತೆಗೆ ನಿಮ್ಮ ಗುರಿಯು, ನಿಮ್ಮ ಸಾಮಥ್ರ್ಯಕ್ಕೂ ಮೀರಿ ಸಾಧನೆಯತ್ತ ಮುನ್ನಡೆಯುವದರ ಜೊತೆಗೆ, ಹೆತ್ತ ತಾಯಿ ತಂದೆ, ಶಾಲೆ, ಜಿಲ್ಲಾ, ರಾಜ್ಯ ಮಟ್ಟಕ್ಕೆ ಕೀರ್ತಿ ತರಬೇಕೆಂದು ಐಎಎಸ್ ಅಧಿಕಾರಿ ಸಂದೀಪ ಬಾಡದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಣ ಇಲಾಖೆ ಹಾಗೂ ಮಂತ್ರ ಫಾರ್ ಚೇಂಜ್ ಸಂಸ್ಥೆಯ ಸಹಯೋಗದಲ್ಲಿಆಯೋಜಿಸಿದ್ದ ‘ನನ್ನ ಕನಸು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ. ವಿದ್ಯಾರ್ಥಿಗಳುಗುರು ಹಿರಿಯರನ್ನು ಗೌರವದಿಂದ ಕಾಣುತ್ತ ನಿಮ್ಮ ಗುರಿ ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಬೇಕು. ಹಗಲು, ಇರುಳು ಎನ್ನದೆ ಕಷ್ಟ ಪಟ್ಟು ಓದದೆ, ಇಷ್ಟ ಪಟ್ಟು ಓದುವದರ ಜೊತೆಗೆ ಉನ್ನತ ಸಾಧನೆಯ ಕನಸು ಕಾಣಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ ,ಹಿರಿಯ ಉಪನ್ಯಾಸಕ ಶೇಖರಪ್ಪ, ಮಂತ್ರ ಫಾರ್ ಚೇಂಜ್ ಸಂಸ್ಥೆ ಸಂತೋಷ, ಗಣೇಶ, ಮುಖ್ಯಗುರು ಕಿಷ್ಣಾರೆಡ್ಡಿ ಇಟ್ಕಿ ಚಂಡರಕಿ, ಶರಣಪ್ಪ ಚಿಂತಕುಂಟಾ, ದೈಹಿಕ ಶಿಕ್ಷಕ ಲಕ್ಷ್ಮೀಕಾಂತರೆಡ್ಡಿ ಚಂಡರಕಿ, ಶಿಕ್ಷಕರು ಇದ್ದರು.