Home ಜಿಲ್ಲೆ ಕಲಬುರಗಿ ಮನೆ ಬೀಗ ಮುರಿದು ಬೆಳ್ಳಿ ಸಾಮಾನು, ನಗದು ಕಳವು

ಮನೆ ಬೀಗ ಮುರಿದು ಬೆಳ್ಳಿ ಸಾಮಾನು, ನಗದು ಕಳವು

ಕಲಬುರಗಿ,ಅ.7-ಮನೆ ಬೀಗ ಮುರಿದು ಬೆಳ್ಳಿ ಸಾಮಾನುಗಳು, ನಗದು ಹಣ ಸೇರಿ 1.10 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಕುಸನೂರ ರಸ್ತೆಯ ಮಹರ್ಷಿ ವಿದ್ಯಾಮಂದಿರ ಹತ್ತಿರದ ಏರಿಯಾದಲ್ಲಿ ನಡೆದಿದೆ.
ಮಹಾನಂದ ಆನಂದ ಸಂಗಶೆಟ್ಟಿ ಎಂಬುವವರ ಮನೆ ಬೀಗ ಮುರಿದು 40 ಸಾವಿರ ರೂ.ಮೌಲ್ಯದ 400 ಗ್ರಾಂ.ನ ಒಂದು ಜೋಡು ಸಮೆ, 20 ಸಾವಿರ ರೂ.ಮೌಲ್ಯದ 200 ಗ್ರಾಂ.ನ ಬೆಳ್ಳಿ ಪ್ಲೇಟ್, 30 ಸಾವಿರ ರೂ.ಮೌಲ್ಯದ ಬೆಳ್ಳಿಯ ತಂಬಿಗೆ, 10 ಸಾವಿರ ರೂ.ಮೌಲ್ಯದ 100 ಗ್ರಾಂ.ಕುಂಕುಮ ಡಬ್ಬಿ ಮತ್ತು 10 ಸಾವಿರ ರೂ.ನಗದು ಹಣ ಸೇರಿ 1.10 ಲಕ್ಷ ರೂ.ಮೌಲ್ಯದ ವಸ್ತು ಕಳವು ಮಾಡಲಾಗಿದೆ. ಮಹಾನಂದ ಆನಂದ ಸಂಗಶೆಟ್ಟಿ ಅವರು ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.