Home ಜಿಲ್ಲೆ ಕಲಬುರಗಿ ರಾಷ್ಟ್ರದ ಅಭಿವೃದ್ಧಿಗೆ ಹೋಮಿ ಜಹಾಂಗೀರ್ ಬಾಬಾರವರ ಕೊಡುಗೆ ಅಪಾರ

ರಾಷ್ಟ್ರದ ಅಭಿವೃದ್ಧಿಗೆ ಹೋಮಿ ಜಹಾಂಗೀರ್ ಬಾಬಾರವರ ಕೊಡುಗೆ ಅಪಾರ

ಕಲಬುರಗಿ : ಹೋಮಿ ಜಹಂಗೀರ್ ಬಾಬಾರವರು “ಭಾರತೀಯ ಪರಮಾಣು ಕಾರ್ಯಕ್ರಮದ ಪಿತಾಮಹ”. ಅವರು ಪರಮಾಣು ಭೌತಶಾಸ್ತ್ರಜ್ಞರು. ಭಾರತೀಯ ಪರಮಾಣು ಶಕ್ತಿ ಕಾರ್ಯಕ್ರಮದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಟಿಐಎಫ್ ಆರ್, ಎಇಇಟಿಯ ಸಂಸ್ಥಾಪಕ ನಿರ್ದೇಶಕರು. ಭಾರತೀಯ ಪರಮಾಣು ಶಕ್ತಿ ಕಾರ್ಯಕ್ರಮದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರದ ಅಭಿವೃದ್ಧಿಗೆ ಹೋಮಿ ಜಹಾಂಗೀರ್ ಬಾಬಾರವರ ಕೊಡುಗೆ ಅಪಾರವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ” ಹೋಮಿ ಜಹಾಂಗೀರ್ ಬಾಬಾರವರ ಜನ್ಮದಿನಾಚರಣೆ “ಯಲ್ಲಿ ಅವರು ಮಾತನಾಡುತ್ತಿದ್ದರು. ಬಾಬಾರವರು ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳನ್ನು ಪೆÇ್ರೀತ್ಸಾಹಿಸಿದರು ಮತ್ತು ವಿಶ್ವ ಸಂಸ್ಥೆಯ ಮೊದಲ ಪರಮಾಣು ಶಕ್ತಿ ಸಮ್ಮೇಳನವನ್ನು ಆಯೋಜಿಸಿದರು. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿಯೂ ಕೂಡಾ ಮಹತ್ವದ ಪಾತ್ರ ವಹಿಸಿದವರು. ಇಂತಹ ಮಹನೀಯರ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.