
ಕಲಬುರಗಿ,ಅ.7-ನವದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಸಿವಿಲ್ ಸರ್ವಿಸ್ ಅಧಿಕಾರಿಗಳ ಸಂಸ್ಥೆಯಲ್ಲಿ ಮಂಗಳವಾರ ನಡೆದ ಹಿಂದಿ ಸಲಹಾ ಸಮಿತಿಯ ಮೂರನೇ ಸಭೆಯ ಸಂದರ್ಭದಲ್ಲಿ ‘ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥ-ಜೀವನ ಮತ್ತು ಧ್ಯೇಯ’ ಕೃತಿಯ ಹಿಂದಿ ಅನುವಾದಿತ ಪುಸ್ತಕವನ್ನು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಬಿಡುಗಡೆ ಮಾಡಿದರು.
ಮೂಲ ಇಂಗ್ಲಿಷ್ ಕೃತಿಯನ್ನು ಪೆÇ್ರ. ಸುನಂದಾ ವಿ. ಕುಲಕರ್ಣಿ ಅವರು ರಚಿಸಿದ್ದು, ಅದರ ಹಿಂದಿ ಅನುವಾದವನ್ನು ಡಾ.ಅಂಬುಜಾ ಎನ್. ಮಳಖೇಡಕರ್ ‘ಸುವನಾ’ ಅವರು ಮಾಡಿದ್ದಾರೆ.
ಡಾ.ಜಿತೇಂದ್ರ ಸಿಂಗ್ ಅವರು ಕೃತಿಯನ್ನು ಮೆಚ್ಚಿ, ತಮ್ಮ ಹಸ್ತಾಕ್ಷರದೊಂದಿಗೆ ಶುಭಾಶಯಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಸಂಪಾದಕ ಜಗಮೋಹನ್ ಸಿಂಗ್ ನೇಗಿ, ಸಂಪಾದಕ ಸಂದೀಪ್ ಮೋಹನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಪೆÇ್ರ. ವಿಷ್ಣುಶಾಸ್ತ್ರಿ ಸೇರಿದಂತೆ ಹಿಂದಿ ಸಲಹಾ ಸಮಿತಿಯ ಗೌರವಾನ್ವಿತ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಡಾ.ಜಿತೇಂದ್ರ ಸಿಂಗ್ ಅವರ ಕರಕಮಲಗಳಿಂದ ಇಲಾಖೆಯ ‘ಕೌಶಲ’ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಯಿತು. ಈ ಪತ್ರಿಕೆಯಲ್ಲಿ ಡಾ. ಅಂಬುಜಾ ಎನ್. ಮಳಖೇಡಕರ ‘ಸುವನಾ’ ಅವರ ನಾಲ್ಕು ಭಜನೆಗಳೂ ಪ್ರಕಟಗೊಂಡಿವೆ.























