Home ಜಿಲ್ಲೆ ಸಂಭ್ರಮದ ರಥೋತ್ಸವ

ಸಂಭ್ರಮದ ರಥೋತ್ಸವ


ಬಾದಾಮಿ,ಜೂ.೨೪: ಕುಳಗೇರಿ ಕ್ರಾಸ್: ಸಂಪೂರ್ಣ ಕನ್ನಡಮಯವಾದ ಭೈರನಹಟ್ಟಿ ಬ್ರಹ್ಮಾನಂದರ ೧೧೧ನೇ ರಥೋತ್ಸವ ಭಕ್ತ ಸಾಗರದ ಮಧ್ಯೆ ಸಡಗರ ಸಂಭ್ರಮದಿAದ ಜರುಗಿತು.
ರಥಕ್ಕೆ ೧೫ಅಡಿ ಎತ್ತರದ ಬ್ರಹತ್ ರುದ್ರಾಕ್ಷಿ ಮಾಲೆ ಸೇರಿದಂತೆ ತೇರಿನ ಸುತ್ತ ಕನ್ನಡ ಭಾವುಟಗಳಿಂದ ಅಲಂಕಾರ ಮಾಡಿದ ಕನ್ನಡಾಭಿಮಾನಿಗಳು ರಥವನ್ನು ಎಳೆದು ದನ್ಯತಾಭಾವ ಸಮರ್ಪಿಸಿದರು.


ಬೈರನಹಟ್ಟಿ ಪೂಜ್ಯ ಶಾಂತಲಿAಗ ಸ್ವಾಮಿಜಿ ಸಾನಿದ್ಯದಲ್ಲಿ ನಡೆದ ರಥೋತ್ಸವದಲ್ಲಿ, ಹಿರೇಮಠದ ಶಿವಯ್ಯನವರು ಸೇರಿದಂತೆ ಶರಣರು, ಸಂತರು, ಸಾವಿರಾರು ಸಂಖ್ಯೆ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಹರ.. ಹರ..ಮಹಾದೇವ, ಬ್ರಹ್ಮಾನಂದ ಸ್ವಾಮಿ ಮಹಾರಾಜಕೀ ಜೈ ಎಂಬ ಜಯಘೋಷ ಮೊಳಗಿದವು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ತೆ ಮಾಡಲಾಗಿತ್ತು. ಸುತ್ತ ಗ್ರಾಮದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.