Home ಮುಖಪುಟ ಸುದ್ದಿ ಜನರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಸಜ್ಜು

ಜನರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಸಜ್ಜು

ಬೆಂಗಳೂರು, ಅ. ೭- ಹಾಲು, ಬಸ್ ಪ್ರಯಾಣದರ ಏರಿಕೆ ಮೂಲಕ ಜನರ ಜೇಬಿಗೆ ಮತ್ತೊಂದು ಹೊಡೆತ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇಂದು ಪ್ರತಿ ಪಕ್ಷ ನಾಯಕರು ಅಶೋಕ್ ದೂರಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ ಹಾಗೂ ಹಣಕಾಸಿನ ನಿರ್ವಹಣೆಯ ವೈಫಲ್ಯದ ಹೊರೆ ಈಗ ಒಂದೊಂದಾಗಿ ಜನರ ಮೇಲೆ ಹಾಕುತ್ತಿದ್ದಾರೆ. ನಂದಿನಿ ಹಾಲಿನ ದರ ಲೀಟರ್‌ಗೆ ೮ರವರೆಗೆ ಹೆಚ್ಚಳಕ್ಕೆ ಸಂಪುಟದ ಒಪ್ಪಿಗೆ.

ಇದರ ಬೆನ್ನಲ್ಲೇ ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಶೇ.೧೦ರಿಂದ ೧೩ರವರೆಗೆ ಹೆಚ್ಚಿಸುವ ಸಿದ್ಧತೆ ನಡೆಸುತ್ತಿದೆ.
ಈಗಾಗಲೇ ಜನರು ಎದುರಿಸುತ್ತಿರುವ ಹೊರೆ ಸಾಲದೆ ಎಂದು ಪ್ರಶ್ನಿಸಿದ್ದಾರೆ

ಬಸ್ ಪ್ರಯಾಣ ದರ ಏರಿಕೆ
ವಿದ್ಯುತ್ ಶುಲ್ಕದ ಹೆಚ್ಚಳ
ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ
ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು
ನೀರು ಮತ್ತು ತ್ಯಾಜ್ಯ ನಿರ್ವಹಣೆ ಶುಲ್ಕಗಳ ಹೆಚ್ಚಳ
ಮೆಟ್ರೋ ಪ್ರಯಾಣ ದರ ಏರಿಕೆ


ಒಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ನೀಡಿದ ಹಣ, ಮತ್ತೊಂದೆಡೆ ತೆರಿಗೆ ಮತ್ತು ಬೆಲೆ ಏರಿಕೆಯ ಮೂಲಕ ಜನರ ಜೇಬಿನಿಂದಲೇ ಎರಡು ಪಟ್ಟು ವಾಪಸ್ ಪಡೆಯುತ್ತಿದೆ ಮಾನ್ಯ ಮುಖ್ಯಮಂತ್ರಿ ಶಿವಕುಮಾರ್ ಅವರ ಸರ್ಕಾರ. ಎಂದು ವಾಗ್ದಾಳಿ ನಡೆಸಿದ್ದಾರೆ

ಹಾಲು ಖರೀದಿಸುವ ಕುಟುಂಬದಿಂದ ಹಿಡಿದು ಪ್ರತಿದಿನ ಬಸ್‌ನಲ್ಲಿ ಪ್ರಯಾಣಿಸುವ ಕಾರ್ಮಿಕ, ವಿದ್ಯಾರ್ಥಿ, ಉದ್ಯೋಗಿ, ಮಧ್ಯಮ ವರ್ಗದ ಕುಟುಂಬದವರೆಗೆ, ಈ ಬೆಲೆ ಏರಿಕೆಯ ಬರೆ ನೇರವಾಗಿ ಜನರ ಬದುಕಿನ ಮೇಲೆ ಬೀಳಲಿದೆ. ಜನರ ಬದುಕನ್ನು ಸುಗಮಗೊಳಿಸಬೇಕಾದ ಸರ್ಕಾರ, ತನ್ನ ಅವ್ಯವಸ್ಥೆಯ ಹೊರೆ ಜನರ ಮೇಲೆ ಹಾಕುತ್ತಾ ಸಾಗುತ್ತಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಹಣಕಾಸಿನ ನಿರ್ವಹಣೆಯ ವೈಫಲ್ಯಕ್ಕೆ ಕರ್ನಾಟಕದ ಜನರು ಏಕೆ ಬೆಲೆ ತೆರಬೇಕು ಎಂದು ಪ್ರಶ್ನಿಸಿದ್ದಾರೆ