Home ಜಿಲ್ಲೆ ‘ನಮಗೆ ನೀರು ಕೊಡಿ, ನಿಮಗೆ ಭೂಮಿ ಕೊಡುತ್ತೇವೆ’ಕನ್ನೂರಿಗೆ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ವಿಸ್ತರಣೆಗೆ ಆಗ್ರಹ

‘ನಮಗೆ ನೀರು ಕೊಡಿ, ನಿಮಗೆ ಭೂಮಿ ಕೊಡುತ್ತೇವೆ’ಕನ್ನೂರಿಗೆ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ವಿಸ್ತರಣೆಗೆ ಆಗ್ರಹ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೧೨: ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಡಿ ವಿಜಯಪುರ ತಾಲೂಕು ನಾಗಠಾಣ ಮತಕ್ಷೇತ್ರದ ನೀರಾವರಿ ವಂಚಿತ ಗಡಿ ಗ್ರಾಮವಾದ ಕನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸಮಗ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊAಡ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಬಳಿಕ ನಡೆದ ಸಭೆಯಲ್ಲಿ ಸಮಗ್ರ ಹೋರಾಟ ಸಮಿತಿ ಕನ್ನೂರಿನ ಅಧ್ಯಕ್ಷ ಕಾಳಪ್ಪ ಬೆಳ್ಳುಂಡಗಿ ಮಾತನಾಡಿ, ಕನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಮೊದಲನೇ ಹಂತದಲ್ಲಿಯೇ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಕನ್ನೂರು ಗ್ರಾಮವನ್ನು ಯೋಜನೆಗೆ ಸೇರ್ಪಡೆಗೊಳಿಸಿ ಕೂಡಲೇ ಯೋಜನಾ ವರದಿ ಹಾಗೂ ಅಂದಾಜು ಪತ್ರಿಕೆ ಸಿದ್ಧಪಡಿಸಿ, ಕಾಮಗಾರಿಗೆ ಶೀಘ್ರ ಚಾಲನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಈ ಭಾಗದ ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿ ಉಪಾಧ್ಯಕ್ಷ ಎಂ.ಎಚ್. ಪಠಾಣ್ ಮಾತನಾಡಿ, ನೀರಾವರಿ ಸೌಲಭ್ಯಕ್ಕಾಗಿ ಗ್ರಾಮಸ್ಥರು ನಿರಂತರ ಹೋರಾಟ ನಡೆಸುತ್ತಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್. ಅಥಣಿ, ಕಲ್ಲಪ್ಪ ಬೆಳ್ಳುಂಡಗಿ, ಭೀಮ ಶಿಂಧೆ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಸಂತೋಷ ತಳವಾರ, ರವಿ ಗಲಗಲಿ, ಬಸುಗೌಡ ಪಾಟೀಲ, ಸಂಜೀವ ಯಾದವಾಡ, ರಾಜುಗೌಡ ಪಾಟೀಲ, ಸುಭಾಷಗೌಡ ಪಾಟೀಲ, ರಫೀಕ್ ಮುಲ್ಲಾ, ಬಸುವ ಸೊಡ್ಡಿ, ದೇವೇಂದ್ರ ಒಡೆಯರ, ಅಪ್ಪಾಸಾಹೇಬ ಕಾಂಬಳೆ, ತುಕಾರಾಮ ಘೋರ್ಪಡೆ, ಪಾಂಡುರAಗ ಧಾತೆ, ವಿಠ್ಠಲ ಭಜಂತ್ರಿ, ರಮೇಶ ಮೈಲಾರ, ಲೋಕೂ ಹೊಸೂರ, ಮಹಾದೇವ ನಾಥಗಾಣ, ದೇವಾನಂದ ರಾಠೋಡ, ವಿಜಯ ರಾಠೋಡ, ಮಹಾದೇವ ತಾಂಬೆ, ಶಕೀಲ್ ಮಧಭಾವಿ, ಮಶಾಕ್ ಚೌಧರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.