ಕಲಬುರಗಿ: ಕನಿಷ್ಟ ವೇತನ ಸೇರಿದಂತೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ನೆತೃತ್ವದಲ್ಲಿ ಇಂದು ಬೃಹತ ಪ್ರತಿಭಟನಾ ರ್ಯಾಲಿ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಶ್ರೀಕಾಂತ ಸ್ವಾಮಿ, ಶಿವಕುಮಾರ ಕಾಂಬಳೆ, ಶಿವರಾಜ ವಾರಿಕ್, ಅಲ್ಲಮಪ್ರಭು ನಿಂಬಗಾ, ಅಮರೇಶ ಇವಗಿಕರ್, ಮಲ್ಲಿಕಾರ್ಜುನ ಸಿಹಿ, ಚಂದ್ರಕಾಂತ ಕೊಠೆ ಸೇರಿದಂತೆ ಹಲವರಿದ್ದರು.