Home ಜಿಲ್ಲೆ ಟಿಆರ್‍ಪಿ ಮೋಹ ಬಿಡಿ, ಸಮಾಜದ ಏಳ್ಗೆಗೆ ಕೈಜೋಡಿಸಿ: ಸುಭಾಷ ಬರಾಲಾ

ಟಿಆರ್‍ಪಿ ಮೋಹ ಬಿಡಿ, ಸಮಾಜದ ಏಳ್ಗೆಗೆ ಕೈಜೋಡಿಸಿ: ಸುಭಾಷ ಬರಾಲಾ

ಬೀದರ್:ಮೇ.4: ಟಿ.ಆರ್ ಪಿ ಹಿಂದೆ ಬೀಳಬಾರದೆಂದು ರಾಜ್ಯಸಭಾ ಸದಸ್ಯರಾದ ಸುಭಾಷ ಬರಾಲಾ ನುಡಿದರು.
ರಾಜಸ್ಥಾನ ರಾಜ್ಯದ ಅಬುರಾಜ ಪರ್ವತದಲ್ಲಿರುವ ಜ್ಞಾನ ಸರೋವರದಲ್ಲಿ ರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮೌಂಟ್ ಆಬು ವಿಶ್ವದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಇಲ್ಲಿ ಬಂದ ಬಳಿಕ ಮನಸ್ಸಿಗೆ ಶಾಂತಿ, ಬುದ್ಧಿಗೆ ಸ್ಥಿರತೆ ದೊರಕುತ್ತದೆ ಎಂದು ಅವರು ತಿಳಿಸಿದರು. ಮಾಧ್ಯಮವು ಕೇವಲ ಸುದ್ದಿಯನ್ನು ನೀಡುವುದಲ್ಲ, ಸಮಾಜಕ್ಕೆ ದೃಷ್ಟಿಕೋನವನ್ನೂ ನೀಡುತ್ತದೆ. ಟಿಆರ್‍ಪಿ ಹಿಂದೆ ಓಡುವುದನ್ನು ಬಿಟ್ಟರೆ ಮಾಧ್ಯಮಕ್ಕೂ ಸಮಾಜಕ್ಕೂ ಲಾಭವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಪತ್ರಿಕೋದ್ಯಮ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಮಾನಸಿಂಗ್ ಪರಮಾರ್ ಅವರು ಮಾತನಾಡಿ, ಪತ್ರಿಕೋದ್ಯಮವು ಕೇವಲ ಮಾಹಿತಿ ನೀಡುವ ಕಾರ್ಯವಲ್ಲ, ಅದು ಸಾಮಾಜಿಕ ಹೊಣೆಗಾರಿಕೆಯನ್ನು ಕೂಡ ಹೊಂದಿದೆ ಎಂದು ಹೇಳಿದರು.
ಪತ್ರಕರ್ತರು ದೈವಿಕ ಗುಣಗಳನ್ನು ಅಳವಡಿಸಿಕೊಂಡರೆ ಪ್ರತ್ಯೇಕ ನಡವಳಿಕಾ ಸಂಹಿತೆಯ ಅಗತ್ಯವೇ ಇರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬ್ರಹ್ಮಾಕುಮಾರೀಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಕೆ ಮೊಹಿನಿ ದೀದಿ ಅವರು ಮಾತನಾಡಿ, ಮಾಧ್ಯಮದ ಬಳಿ ದೊಡ್ಡ ಪ್ರಭಾವವಿದ್ದು, ಸಮಾಜಕ್ಕೆ ಶಾಂತಿ ಸಂದೇಶ ನೀಡುವುದು ಅವಶ್ಯಕ ಎಂದು ಹೇಳಿದರು.
ಮಾಧ್ಯಮ ವಿಭಾಗದ ಉಪಾಧ್ಯಕ್ಷೆ ಬಿ.ಕೆ ಸರಳಾ ದೀದಿ ಅವರು ಮಾತನಾಡಿ, ಮಾಧ್ಯಮವು ಜನರಿಗೆ ಪರಿಹಾರಗಳನ್ನು ತಲುಪಿಸುವ ಕಾರ್ಯ ಮಾಡಬೇಕು. ಬ್ರೇಕಿಂಗ್ ನ್ಯೂಸ್ ನಡುವೆಯೂ ಸಕಾರಾತ್ಮಕ ಮನೋಭಾವವನ್ನು ಕಾಪಾಡಬೇಕು ಎಂದು ಹೇಳಿದರು.
ಬಿ.ಕೆ ಶೀಲೂ ದೀದಿ ಅವರು, ರಾಜಯೋಗ ಧ್ಯಾನದ ಮಹತ್ವವನ್ನು ವಿವರಿಸಿ, ಆತ್ಮ ಪರಿಚಯ ಮತ್ತು ಧ್ಯಾನದಿಂದ ಶಾಂತಿ ಅನುಭವ ಸಾಧ್ಯ ಎಂದು ಹೇಳಿದರು.
ಬಿ.ಕೆ ಸುದೇಶ ದೀದಿ ಅವರು ಮಾತನಾಡಿ, ಶಾಂತಿ ಮಾನವನ ಮೂಲ ಸ್ವಭಾವವಾಗಿದ್ದು, ವಿಶ್ವವನ್ನು ಕುಟುಂಬವಾಗಿ ನೋಡುವ ಮನೋಭಾವ ಬೆಳೆಸಬೇಕು ಎಂದು ಹೇಳಿದರು.
ಬ್ರಹ್ಮಾಕುಮಾರೀಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕರೂಣಾ ಭಾಯಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,, ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಈ ಸಂಸ್ಥೆ 90 ವರ್ಷಗಳಿಂದ ಸಾರುತ್ತಿದೆ ಎಂದು ಹೇಳಿದರು.
ಡಿಡಿ ನ್ಯೂಸ್ ಸಲಹಾ ಸಂಪಾದಕ ಮನೀಷ್ ಬಾಜಪೇಯಿ ಮಾತನಾಡಿ, ಸಮಾಜದ ಸಮಸ್ಯೆಗಳ ಮೂಲವನ್ನು ಗುರುತಿಸುವುದು ಮುಖ್ಯ ಎಂದು ಹೇಳಿದರು.
ದೈನಿಕ್ ಟ್ರಿಬ್ಯೂನ್ ಸಂಪಾದಕ ನರೇಶ ಕೌಶಲ್ ಮಾತನಾಡಿ, ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಮಹಿಳೆಯರಿಗೆ ಶೇಕಡಾ 100 ರಷ್ಟು ಅವಕಾಶ ನೀಡಲಾಗಿದೆ ಎಂದು ಪ್ರಶಂಸಿಸಿದರು.
ಸಂಪಾದಕಿ ತಾನ್ಯಾ ಪಟ್ಟನಾಯಕ ಮಾತನಾಡಿ, ಮಾಧ್ಯಮವು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಡಾ. ರಾಜೇಶ ರಾಜೌರೆ ಅವರ ಹೊರತಂದ ಪುಸ್ತಕ ಬಿಡುಗಡೆ ಮಾಡಲಾಯಿತು. ಬಿ.ಕೆ ಚಂದಾ ದೀದಿ ಕಾರ್ಯಕ್ರಮ ನಿರೂಪಿಸಿದರು.