
ದಿನವದೆಹಲಿ,ಮೇ.೨೩- ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ದೇಶೀಯ ತೈಲ ಕಂಪನಿಗಳು ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ ಎಳೆದಿವೆ. ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್-ಡೀಸೆಲ್ ದರವನ್ನು ಮೂರು ಬಾರಿ ಹೆಚ್ಚಳ ಮಾಡಿದೆ.
ಇಂದಿನಿಂದಲೇ ಜಾರಿಗೆ ಬಂದಿರುವ ನೂತನ ಪರಿಷ್ಕರಣೆಯ ಅನ್ವಯ, ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ೮೭ ಪೈಸೆ ಹಾಗೂ ಡೀಸೆಲ್ ದರದಲ್ಲಿ ೯೧ ಪೈಸೆ ಹೆಚ್ಚಳ ಮಾಡಲಾಗಿದೆ.ಸತತ ಏರಿಕೆಯ ಬಿಸಿಕಳೆದ ಕೆಲವು ದಿನಗಳಿಂದ ಇಂಧನ ದರಗಳು ಸತತವಾಗಿ ಏರುತ್ತಲೇ ಸಾಗಿವೆ. ಮೇ ೧೬ ರಂದು ಇಡೀ ದೇಶಾದ್ಯಂತ ಲೀಟರ್ಗೆ ಒಮ್ಮೆಲೇ ೩ ರೂಪಾಯಿ ಇಳಿಕೆಗೆ ಬ್ರೇಕ್ ಹಾಕಿ ಭಾರಿ ಏರಿಕೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಮೇ ೧೯ ರಂದು ಮತ್ತೆ ೯೦ ಪೈಸೆ ಹೆಚ್ಚಿಸಲಾಗಿತ್ತು.
ಇದೀಗ ಕೇವಲ ಮೂರೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ದರ ಹೆಚ್ಚಳ ಮಾಡಿರುವುದು ಮಧ್ಯಮ ವರ್ಗದವರ ಕೆಂಗಣ್ಣಿಗೆ ಗುರಿಯಾಗಿದೆ.ಒಂದೇ ವಾರದಲ್ಲಿ ತೈಲ ಕಂಪನಿಗಳು ಸಾರ್ವಜನಿಕರ ಮೇಲೆ ಸರಿಸುಮಾರು ೪.೮೦ ರೂ. ಗಳಷ್ಟು ಹೆಚ್ಚುವರಿ ಹೊರೆ ಹೊರಿಸಿವೆ.ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದಿನ ಹೊಸ ದರಗಳು (ರೂ. ಗಳಲ್ಲಿ):ನಗರ ಪೆಟ್ರೋಲ್ (ಲೀಟರ್ಗೆ)ಡೀಸೆಲ್ ದರ (ಲೀಟರ್ಗೆ) ಏರಿಕೆಯಾಗಿರುವ ದರ ಹೀಗಿದೆ.
ಏರಿಕೆಗೆ ಮಧ್ಯಪ್ರಾಚ್ಯ ಬಿಕ್ಕಟ್ಟೇ ಕಾರಣವಾಗಿದ್ದು,ಇರಾನ್ ಸುತ್ತಮುತ್ತಲಿನ ಯುದ್ಧದ ವಾತಾವರಣ ಹಾಗೂ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ತೀವ್ರ ಉದ್ವಿಗ್ನತೆಯೇ ಇಂದಿನ ಜಾಗತಿಕ ತೈಲ ಮಾರುಕಟ್ಟೆಯ ಏರುಪೇರಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ೧೦೪ ಡಾಲರ್ ಗಡಿ ದಾಟಿದ್ದರೆ, ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲ ದರ ೯೭ ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಒಂದು ಹಂತದಲ್ಲಂತೂ ಇದು ೧೧೧ ಡಾಲರ್ ತಲುಪಿ ತಲ್ಲಣ ಸೃಷ್ಟಿಸಿತ್ತು.ಒಎಮ್ಸಿ ಸಂಸ್ಥೆಗಳ ನಷ್ಟದ ವಾದಕಳೆದ ಹಲವು ತಿಂಗಳುಗಳಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದರೂ ಸಾರ್ವಜನಿಕ ವಲಯದ ತೈಲ ಮಾರ್ಕೆಟಿಂಗ್ ಕಂಪನಿಗಳು ದೇಶೀಯ ಇಂಧನ ಬೆಲೆಯನ್ನು ಸ್ಥಿರವಾಗಿಟ್ಟಿದ್ದವು.
ಇದರಿಂದಾಗಿ ಕಂಪನಿಗಳಿಗೆ ಪ್ರತಿ ತಿಂಗಳು ಸುಮಾರು ೧,೦೦೦ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿತ್ತು ಎನ್ನಲಾಗಿದೆ. ಇದೀಗ ಜಾಗತಿಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿರುವುದರಿಂದ, ತೈಲ ಕಂಪನಿಗಳು ಅನಿವಾರ್ಯವಾಗಿ ಆ ನಷ್ಟದ ಹೊರೆಯನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸಲು ಮುಂದಾಗಿವೆ.ಇತ್ತೀಚೆಗಷ್ಟೇ ನಡೆದ ಸಿಐಐ ವಾರ್ಷಿಕ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, “ಜಾಗತಿಕ ತಲ್ಲಣಗಳ ನಡುವೆಯೂ ಭಾರತವು ಬಲಿಷ್ಠ ನೀತಿಗಳ ಮೂಲಕ ೨೦೨೨ ರಿಂದ ಇಂಧನ ಪೂರೈಕೆ ಹಾಗೂ ದರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ” ಎಂದು ದೇಶದ ಮಾರುಕಟ್ಟೆ ನಿರ್ವಹಣೆಯನ್ನು ಶ್ಲಾಘಿಸಿದ್ದರು.
ಆದರೆ, ಇರಾನ್ ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ಮುಂಬರುವ ದಿನಗಳಲ್ಲಿ ತೈಲ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಯಾವ ನಗರದಲ್ಲಿ ಎಷ್ಟು ದರ
ಬೆಂಗಳೂರು-ಪೆಟೋಲ್: ೧೦೮.೦೯, ಡೀಸೆಲ್ ೯೫.೯೯
ದೆಹಲಿ- ಪೆಟ್ರೋಲ್: ರೂ ೯೯.೫೧ , ಡೀಸೆಲ್: ರೂ ೯೨.೪೯
ಕೋಲ್ಕತ್ತಾ- ಪೆಟ್ರೋಲ್: ರೂ ೧೧೦.೬೪ , ಡೀಸೆಲ್: ರೂ ೯೭.೦೨
ಮುಂಬೈ – ಪೆಟ್ರೋಲ್: ರೂ ೧೦೮.೪೯ ,ಡೀಸೆಲ್: ರೂ ೯೫.೦೨
ಚೆನ್ನೈ- ಪೆಟ್ರೋಲ್: ರೂ ೧೦೫.೩೧ ,ಡೀಸೆಲ್: ರೂ ೯೬.೯೮
ಗುರುಗ್ರಾಮ್- ಪೆಟ್ರೋಲ್: ರೂ ೧೦೦.೩೮ , ಡೀಸೆಲ್: ರೂ ೯೨.೯೨
ನೋಯ್ಡಾ – ಪೆಟ್ರೋಲ್: ರೂ ೯೮.೭೮ ,ಡೀಸೆಲ್: ರೂ ೯೩.೧೨

























