
ಜೇವರ್ಗಿ,ಮೇ.23-ದುಡಿಯುವ ಕೈಗಳಿಗೆ ನರೇಗಾ ಬಲ ತಂದುಕೊಡಲಿದ್ದು, ಮನರೇಗಾದಡಿ ಉದ್ಯೋಗ ಚೀಟಿ ಹೊಂದಿದ ಅಹರ್ರ ಫಾಲಾನುಭವಿಗಳು ಯೋಜನೆಯಡಿ ಕೆಲಸ ಮಾಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರ ರೆಡ್ಡಿ ಹೇಳಿದರು.
ಶುಕ್ರವಾರ ತಾಲೂಕಿನ ಜೇರಟಗಿ ಗ್ರಾಮ ಪಂಚಾಯತಿಗೆ ಭೇಟಿ ಕೊಟ್ಟು ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ಸಾಮೂಹಿಕ ಕ್ಯಾನಲ್ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿದರು. ನರೇಗಾ ಯೋಜನೆಯಡಿ ವಯಸ್ಸಿನ ಮಿತಿ ಇರುವುದಿಲ್ಲ.18 ವರ್ಷ ಮೇಲ್ಪಟ್ಟ ಯುವಕರಿಂದ ಇಳಿ ವಯಸ್ಸಿನ ವಯೋವೃದ್ಧರು ಕೆಲಸ ಮಾಡಲು ಯೋಜನೆಯಡಿ ಅವಕಾಶವಿರುತ್ತದೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಡಿ ಕೆಲಸಕ್ಕೆ ಬರಬೇಕು, ಗಂಡು ಮತ್ತು ಹೆಣ್ಣು 370 ರೂ. ಸಮಾನ ಕೂಲಿ ಪಡೆದುಕೊಳ್ಳಲು ಅವಕಾಶವಿದ್ದು, ಸುಮ್ಮನೆ ಮನೆಯಲ್ಲಿಯೇ ಕುಳಿತು ಕಾಲ ಹರಣ ಮಾಡದೆ ನರೇಗಾದಡಿ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ಕರೆ ನೀಡಿದರು.
ಯೋಜನೆ ನಿಯಮದಂತೆ ಪಾರದರ್ಶಕವಾಗಿ ಕೆಲಸ ಮಾಡಬೇಕು. ಎನ್ಎಂಎಂಎಸ್ ತಂತ್ರಾಂಶದಲ್ಲಿ ಫೇಸ್ ಅತ್ತೆಂಟಿಕೇಶನ್ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಇದೆ ವೇಳೆ ಕಾರ್ಮಿಕರ ಹಾಜರಾತಿ ಹಾಗೂ ಪ್ರಥಮ ಚಿಕೆತ್ಸೆ ಪೆಟ್ಟಿಗೆ ಪರಿಶೀಲಸಿ ಕೆಲಸ ಮಾಡುವ ವೇಳೆ ತಲೆ ಸುತ್ತು ಇಲ್ಲವೇ ಸಣ್ಣ ಪುಟ್ಟ ಗಾಯಗಳು ಆದಂತೆ ಸಂದರ್ಭದಲ್ಲಿ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಕಾರ್ಮಿಕರಿಗೆ ಮಾತನಾಡಿಸಿ ಅವರ ಸಮಸ್ಯೆ ಆಲಿಸಿ ಸೂಕ್ತ ಸಲಹೆ ನೀಡಿದರು.
ನಂತರ ನರೇಗಾ ತಾಲೂಕು ಐಇಸಿ ಸಂಯೋಜಕರಾದ ಚಿದಂಬರ ಪಾಟೀಲ ಮಾತನಾಡಿ, ಬೇಸಿಗೆ ತಾಪಮಾನ ಹೆಚ್ಚಿರುವದರಿಂದ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದರು.
ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇಕಡಾ 50% ಕೆಲಸದ ಪ್ರಮಾಣದಲ್ಲಿ ರಿಯಾಯಿತಿಯಿದ್ದು, ಕಾರ್ಮಿಕರು ಸದುಪಯೋಗ ಪಡೆದುಕುಕೊಂಡು ಉತ್ತಮವಾಗಿ ಕೆಲಸ ನಿರ್ವಹಹಣೆ ಮಾಡಬೇಕು ಎಂದರು.
ಇದಕ್ಕೂ ಮೊದಲು ಹರವಾಳ ಗ್ರಾಮ ಪಂಚಾಯತ ದೂರಿನ ಹಿನ್ನಲೆ ಕಾರ್ಯನಿರ್ವಾಹಕ ಅಧಿಕಾರಿಗಳು ಬೋರ್ವೆಲ್ ಇರುವ ಭೌತಿಕ ಸ್ಥಳ ವೀಕ್ಷಿಸಿ ನಂತರ ಗ್ರಾಮ ಪಂಚಾಯತಿಗೆ ಭೇಟಿಕೊಟ್ಟು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಕ್ರಮ ವಹಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರಾಜಕುಮಾರ ಮೂಲಿಮನಿ, ಸಾಭಿರುದ್ಧಿನ್, ಗಿರೀಗೌಡ, ಡಿಇಓ ಶಿವಮೂರ್ತಿ, ವಸೂಲಿ ಗಾರ ಸಿದ್ದಣ್ಣ , ಪಂಪ್ ಆಪರೇಟರ್, ಗ್ರಾಮ ಕಾಯಕ ಮಿತ್ರ ಭಾಗ್ಯಶ್ರೀ, ಸೇರಿದಂತೆ ಗ್ರಾಮ ಪಂಚಾಯತ ಎಲ್ಲ ಸಿಬ್ಬಂದಿಗಳು ಮತ್ತು ಕೂಲಿ ಕಾರ್ಮಿಕರು ಹಾಜರಿದ್ದರು.






















