Home ಜಿಲ್ಲೆ ಕಲಬುರಗಿ ರೈಲಿಗೆ ಸಿಕ್ಕು ಯುವಕ ಆತ್ಮಹತ್ಯೆ

ರೈಲಿಗೆ ಸಿಕ್ಕು ಯುವಕ ಆತ್ಮಹತ್ಯೆ

ಕಲಬುರಗಿ, ಮೇ 23: ರೈಲಿಗೆ ಸಿಕ್ಕು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಗರದ ಬಿದ್ದಾಪುರ ಕಾಲೋನಿ ರೈಲ್ವೆ ಗೇಟ್ ಹತ್ತಿರ ಸಂಭವಿಸಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸುಲಗುಡ್ಡ ತಾಂಡಾ (ಮುಂಡರಗಿ ಪೋಸ್ಟ್ ) ನಿವಾಸಿ ದೇವಣ್ಣ ಜಾಪಲಪ್ಪ ( 26) ಆತ್ಮಹತ್ಯೆಗೆ ಶರಣಾದ ಯುವಕ.
ಕಳೆದ 3-4 ತಿಂಗಳಿಂದ ಪತ್ನಿ, ಇಬ್ಬರು ಮಕ್ಕಳೊಂದಿಗೆ ಕಲಬುರಗಿಗೆ ಬಂದಿದ್ದ ,ದೇವಣ್ಣ ಜೆಸಿಬಿ ಆಪರೇಟರ್ ಕೆಲಸ ಮಾಡಿಕೊಂಡಿದ್ದ .
ಕುಡಿತದ ಚಟವಿದ್ದ ಆತ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಶುಕ್ರವಾರ ಪತ್ನಿಯೊಂದಿಗೆ ಜಗಳವಾಡಿ ಬಿದ್ದಾಪುರ ಕಾಲೋನಿ ರೈಲ್ವೆ ಗೇಟ್ ಹತ್ತಿರ ಗೂಡ್ಸ್ ಗಾಡಿ ಬರುವಾಗ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ದೇಹ ಛಿದ್ರವಾಗಿದೆ.ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.