Home ಜಿಲ್ಲೆ ಕಲಬುರಗಿ ರೌಡಿ ಶೀಟರ್ ಈಶ್ವರ ಮುಡಬಿ ಗಡಿಪಾರು

ರೌಡಿ ಶೀಟರ್ ಈಶ್ವರ ಮುಡಬಿ ಗಡಿಪಾರು

ಕಲಬುರಗಿ,ಮೇ.23-ರೌಡಿಶೀಟರ್ ಈಶ್ವರ ತಂದೆ ಶಿವಶರಣಪ್ಪ ಮುಡಬಿ (27)ಯನ್ನು ಬೀದರ್ ಜಿಲ್ಲೆಯ ಹುಮನಾಬಾದ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಸಂಜೀವನಗರದ ನಿವಾಸಿಯಾದ ರೌಡಿಶೀಟರ್ ಈಶ್ವರ ಮುಡಬಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಗಣಗಳು ದಾಖಲಾಗಿದ್ದು, ಆರೋಪಿಯನ್ನು”ಎ”ರೌಡಿ ಎಂದು ಗುರುತಿಸಲಾಗಿದೆ.
ಈತನ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗಡಿಪಾರು ಮಾಡುವುದು ಸೂಕ್ತ ಎಂದು ಚೌಕ್ ಪೊಲೀಸ್ ಠಾಣೆಯ ಪಿಐ ಸುಶೀಲಕುಮಾರ ಅವರು ವರದಿ ನೀಡಿದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಹಾಗೂ ನ್ಯಾಯಾಲಯದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆರೋಪಿಯನ್ನು ಬೀದರ್ ಜಿಲ್ಲೆಯ ಹುಮನಾಬಾದ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.