Home ಜಿಲ್ಲೆ ಕಲಬುರಗಿ ವನ್ಯ ಪ್ರಾಣಿಗಳ ಬೇಟೆಗಾರನ ವಶಕ್ಕೆ ಪಡೆದ ಅರಣ್ಯಾದಿಕಾರಿಗಳು

ವನ್ಯ ಪ್ರಾಣಿಗಳ ಬೇಟೆಗಾರನ ವಶಕ್ಕೆ ಪಡೆದ ಅರಣ್ಯಾದಿಕಾರಿಗಳು

ಕಲಬುರಗಿ ; ಆಳಂದ ತಾಲೂಕಿನ ಅರಣ್ಯ ವ್ಯಾಪ್ತಿಯ ಅಂಬಲಗಾ ಗ್ರಾಮದ ಆರೋಪಿ ಅರುಣ್ ಎಂಬಾತ ವನ್ಯಪ್ರಾಣಿಗಳಾದ ಉಡ, ಮೊಲ, ಕಾಡುಹಂದಿ ಹಾಗೂ ಇತರೆ ಪ್ರಾಣಿಗಳನ್ನು ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹರಿಬಿಟ್ಟಿದ್ದನು.

ಈ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಎಸಿಎಫ್ ಬಸವರಾಜ ಡಾಂಗೆ ಅವರ ಮಾರ್ಗದರ್ಶನದಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ ಕುಮಾರಿ ಐಶ್ವರ್ಯಾ ಗೊಬ್ಬುರ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಕೇವಲ 24 ಗಂಟೆಗಳಲ್ಲಿ ಬಂಧಿಸಿ ಜುಡಿಷಿಯಲ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ವೀರೇಂದ್ರ ಸಿ ವಾಯ್, ಭಾನುಪ್ರತಾಪ, ಶ್ರೀಶೈಲಬಾಬು, ಶಿವಗೊಂಡಪ್ಪ, ಶಿವರಾಜ ಪದಕಿ, ರಮೇಶ್ ತಳವಾರ ಭೂತಾಳಿ ಮತ್ತು ಹೈದರ ಅಲಿ,ಅವರ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.