
ಶಿಡ್ಲಘಟ್ಟ:-ಜೂ,೧೯-ದಿನಾಂಕ ೨೧ ರಂದು ಭಾನುವಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ೧೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ರಾಜೀವ್ ಗೌಡರು ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ಪಂಚಾಯತಿಗೆ ಎರಡು ಹಾಗೂ ನಗರ ವ್ಯಾಪ್ತಿಯ ವಾರ್ಡ್ ಗಳಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ತಿಳಿಸಿದರು.
ಈಗಾಗಲೇ ಶಿಡ್ಲಘಟ್ಟ ಕ್ಷೇತ್ರದಿಂದ ಭಾರತ್ ಜೋಡೊ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ತೆರಳಿ ಯಶಸ್ವಿಯಾಗಿಸಿದ್ದೇವೆ ನಾ ನಾಯಕಿ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಾವಿರಾರು ಮಹಿಳಾ ಕಾರ್ಯಕ್ರಮ ಯಶಸ್ವಿಯಾಗಿಸಿದ್ದೇವೆ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ೭೫ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿ ಯಶಸ್ವೀ ಕಾರ್ಯಕ್ರಮ ಮಾಡಿಸಿದ್ದೇವೆ, ದೇವನಹಳ್ಳಿಯಲ್ಲಿ ಕೆ ಹೆಚ್ ಮುನಿಯಪ್ಪ ನವರು ಆಯೋಜನೆ ಮಾಡಲಾಗಿದ್ದ ಸಿ ಎಂ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಾವಿರಾರು ಜನ ಸೇರಿಸಿದ ಹೆಗ್ಗಳಿಕೆ ನಮ್ಮದಾಗಿದ್ದು ಡಿ.ಕೆ ಶಿವಕುಮಾರ್ ನನ್ನ ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಎಲ್ಲರ ಸಹಕಾರ ಅವಶ್ಯವಿದೆ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು.
ಎನ್ ಡಿ ಎ ಪಕ್ಷಗಳು ಚುನಾವಣಾ ಅಧಿಕಾರಿಗಳನ್ನು ಕೈಗೊಂಬೆಗಳಾಗಿಸಿಕೊಂಡು ಚುನಾವಣೆಯನ್ನು ಅಪವಿತ್ರಗೊಳಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ತರುವಂತಹ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡುತ್ತಿರುವುದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕಾಗಿದೆ, ಮುಂದೆ ಇಂತಹ ಪ್ರಸಂಗಗಳು ನಡೆಯದಂತೆ ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಪಕ್ಷ ಸಂಘಟನೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಗೊಳ್ಳಿಸುವ ಕೆಲಸವಾಗಬೇಕಾಗಿದೆ.
ವರಿಷ್ಠರು ಮಂಬರುವ ಶಿಡ್ಲಘಟ್ಟ ಕ್ಷೇತ್ರದ ಎಲ್ಲಾ ಚುನಾವಣೆಗಳ ಜವಾಬ್ದಾರಿ ನನಗೆ ವಹಿಸಿದ್ದು ಪಂಚಾಯತಿ ಮಟ್ಟದ ಎಲ್ಲಾ ಮುಖಂಡರನ್ನೂಳಗೊಂಡ ಸಭೆಗಳನ್ನು ನಡೆಸುವ ಮೂಲಕ ಎಲ್ಲ ರೀತಿಯ ಸಿದ್ದತೆ ನಡೆಸಲಾಗುವುದು ಎಂದರು.
೨೧ ರ ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಸಂತಸದ ಖುಷಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೧೦ ಸಾವಿರ ಜನಕ್ಕೆ ಬಾಡೂಟ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಂದರ್ಭದಲ್ಲಿ ಚಿಲಕಲನೇರ್ಪು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಕೃಷ್ಣಾರೆಡ್ಡಿ, ಅಪ್ಸರ್ ಪಾಷ, ರಾಯಪಲ್ಲಿ ಅಶ್ವಥ್ ರೆಡ್ಡಿ, ಹಿರಿಯ ಹೋರಾಟಗಾರರಾದ ವೆಂಕಟೇಶ್, ಹಿರಿಯ ಕಾಂಗ್ರೆಸ್ ಮುಖಂಡ ಗುಡಿಯಪ್ಪ, ನಾರಾಯಣಸ್ವಾಮಿ, ಗುಡಿಹಳ್ಳಿ ನಾರಾಯಣಸ್ವಾಮಿ, ಕಂಪನಿ ದೇವರಾಜು, ಮಾಜಿ ಜಿಲ್ಲಾ ಪಂ, ಸದಸ್ಯ ಓಬಳಪ್ಪ, ಮುನೇಗೌಡ, ಕೇಶವಮೂರ್ತಿ, ತನು, ಸೈಯದ್, ಸಲೀಮ್, ಸಾದಲಿ ಗೋವಿಂದರಾಜು, ಗೋಪಾಲ್, ಗಾಯಿತ್ರಿ, ಯಾಸ್ಮಿನ್ ತಾಜ್, ಶೆಟ್ಟಹಳ್ಳಿ ರಾಮಚಂದ್ರ ಇನ್ನು ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

























