Home ಜಿಲ್ಲೆ ಕಲಬುರಗಿ ಸಾಲದ ಸುಳಿಗೆ ವಿಷ ಸೇವಿಸಿ ವೃದ್ಧ ರೈತ ಆತ್ಮಹತ್ಯೆ

ಸಾಲದ ಸುಳಿಗೆ ವಿಷ ಸೇವಿಸಿ ವೃದ್ಧ ರೈತ ಆತ್ಮಹತ್ಯೆ

ಆಳಂದ: ವಯೋವೃದ್ಧ ರೈತನೋರ್ವ ಸಾಲದ ಸುಳಿಯಿಂದ ಮನನೋಂದ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ತಾಲೂಕಿನ ಕಡಗಂಚಿ ಬಳಿಯ ನಿಂಬರಗಾ ಠಾಣೆ ವ್ಯಾಪ್ತಿಯ ನಿಂಬರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಆಲೂರ ಬಿ. ಗ್ರಾಮದಲ್ಲಿ ನಡೆದಿದೆ.
ವಿಠ್ಠಲ್ ಅಪ್ಪಯ್ಯ ಜೋಳದ ( 67), ಎಂಬುವ ರೈತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಮೃತರಿಗೆ ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಬ್ಯಾಂಕ್‍ನಲ್ಲಿ 2.30 ಲಕ್ಷ ರೂಪಾಯಿ ಹಾಗೂ ಖಾಸಗಿವಾಗಿ 5ರಿಂದ 6ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಮೃvರಿಗಿರುವ 6 ಎಕರೆ ಜಮೀನಿನಲ್ಲಿ ಕಳೆದ ಸಾಲಿನಲ್ಲಿ ಬಾವಿ ತೋಡಿ ಬಾವಿಗೆ ರಿಂಗ್ ಕೆಲಸ ಮಾಡಿಸಿದ್ದ ಒಟ್ಟು 5-6ಲಕ್ಷ ರೂಪಾಯಿ ಖರ್ಚು ಮಾಡಿದ್ದು ಬಾವಿ ತೋಡಿ ಎರಡ್ಮೂರು ತಿಂಗಳ ಮಾತ್ರ ನೀರಿದ್ದು ಬಳಿಕ ಬಾವಿಯ ನೀರು ಒಣಗಿದ್ದ ಹಿನ್ನೆಲೆಯಲ್ಲಿ ಚಿಂತಿತರಾಗಿ ಕಳೆದ ಅಗಷ್ಟ 18ರಂದು ತನ್ನ ಹೊಲದಲ್ಲೇ ವಿಷ ಸೇವಿಸಿ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಕುಟಂಬಸ್ಥರು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರು. ಚಿಕಿತ್ಸೆ ಫಲಕಾರಿಯಾಗಿದೆ ಅ. 23ರಂದು ಬಾನುವಾರ ಮೃತಪಟ್ಟಿದ್ದಾರೆ ಎಂದು ಮೂಲಗಳು ಹೇಳಿಕೊಂಡಿವೆ. ಮೃತರ ಅಂತ್ಯಕ್ರಿಕೆ ಅ.24ರಂದು ಅಂತ್ಯಕ್ರಿಯೆ ಕೈಗೊಳ್ಳಲಾಗಿದೆ. ಈ ಕುರಿತು ನಿಂಬರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾರ್ಯಾಚರಣೆ ನಡೆಸಿದ್ದಾರೆ.