
ಕಲಬುರಗಿ,ಮೇ.23-ಪರವಾನಿಗೆ ಇಲ್ಲದೆ ಶೆಡ್ಯೂಲ್-ಹೆಚ್ ಡ್ರಗ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಮಾರ್ಗದರ್ಶನದ ಮೇಲೆ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆ ಪಿಐ ಮಹಾಂತೇಶ ಪಾಟೀಲ, ಸಿಬ್ಬಂದಿಗಳಾದ ಪರಶುರಾಮ, ಉತ್ತಮ, ಪ್ರಿಯಾ ಹಾಗೂ ಗುರುನಾಥ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿ ಬಾಪು ನಗರದ ಮಾಂಗರವಾಡಿ ಗಲ್ಲಿಯ ರೇವಮ್ಮ ಗಂಡ ಸಾಯಬಣ್ಣ ಕಟ್ಟಿಮನಿ (61) ಎಂಬ ಮಹಿಳೆಯನ್ನು ಬಂಧಿಸಿ 33,120 ರೂ.ಮೌಲ್ಯದ ಡ್ರಗ್ ವಶ ಪಡಿಸಿಕೊಂಡಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















