Home ಜಿಲ್ಲೆ ಬರೀದ್ ಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಿಯಾನ

ಬರೀದ್ ಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಿಯಾನ

ಬೀದರ್: ಮೇ.4:ಹೆಚ್ಚುತ್ತಿರುವ ಬಿಸಿಲು ಹಾಗೂ ತಾಪಮಾನದಿಂದ ಪಶು-ಪಕ್ಷಿಗಳಿಗೆ ಉಂಟಾಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಅಭಿಯಾನ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಪಾಟೀಲ್ ಅವರು ಮಾತನಾಡಿ, “ಪಕ್ಷಿಗಳ ಮೇಲೆ ದಯೆ ತೋರಿಸಿ, ಅವುಗಳಿಗೆ ನೀರು ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಪಕ್ಷಿಗಳು ತಮ್ಮ ಬಾಯಾರಿಕೆಯನ್ನು ಹೇಳಿಕೊಳ್ಳುವುದಿಲ್ಲ. ಆದ್ದರಿಂದ ಮನೆ ಆವರಣಗಳಲ್ಲಿ, ಗಿಡಮರಗಳ ಕೆಳಗೆ ಸಾಧ್ಯವಾದ ಸ್ಥಳಗಳಲ್ಲಿ ನೀರಿನ ಪಾತ್ರೆಗಳನ್ನು ಇಡುವುದು ಅಗತ್ಯ,” ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕøತರಾದ ವೀರಭದ್ರಪ್ಪ ಉಪ್ಪಿನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಪಕ್ಷಿಗಳು ಮತ್ತು ಪರಿಸರ ಪರಸ್ಪರ ಅವಲಂಬಿತವಾಗಿವೆ. ಪರಿಸರ ಸಮತೋಲನ ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ. ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ವಿವಿಧ ಸ್ಥಳಗಳಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಉದ್ಯಾನವನಕ್ಕೆ ಆಗಮಿಸಿದ ಡಾ. ಗಂಗಾಂಬಿಕಾ ಅಕ್ಕ ಅವರಿಗೆ ಯೋಗ ತಂಡದ ವತಿಯಿಂದ ಗೌರವಿಸಲಾಯಿತು. ನಿವೃತ್ತ ಸರಕಾರಿ ಉಪನಿರ್ದೇಶಕರಾದ ಗಂಗಪ್ಪ ಸಾವಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ನಂದಕುಮಾರ ತಾಂದಳೆ, ಈಶ್ವರ ಕನೆರಿ, ನ್ಯಾಯವಾದಿ ಮೋಹನ ಏಳನೂರಕರ್, ನೀಲಮ್ಮ ರೂಗನ್, ಯೋಗೇಂದ್ರ ಯದಲಾಪುರ, ಪುಷ್ಪಾ ಕಪಲಾಪುರ, ಅರುಣಾ ಪಾಟೀಲ್, ಮಲ್ಲಿಕಾರ್ಜುನ ಹಂಡೆ, ಗುರುಸ್ವಾಮಿ, ಸಂಜು ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಅಶೋಕ, ಸಂಜು ಶೀಲವಂತ, ವೀರಶೆಟ್ಟಿ, ಅಂತೇಶ್ವರ್ ಶೆಟ್ಕಾರ್, ನಂದಕುಮಾರ ಕಾವಡಿ, ಚಂದ್ರಪ್ಪ ಬಿರಾದಾರ್, ಮಹಾಲಿಂಗಪ್ಪ ಬೆಲ್ದಾಳೆ, ಪ್ರಭುಶೆಟ್ಟಿ ಮುಲಗೆ, ಪುಣ್ಯಾವತಿ ವಿಸಾಜಿ, ಮಲ್ಲಿಕಾರ್ಜುನ ಪಂಚಾಕ್ಷರ, ಎಸ್.ಬಿ. ಬಿರಾದಾರ್, ಬುಕ್ಕಾ, ಸಿದ್ದಯ್ಯ ಕಾವಡಿ, ಜ್ಞಾನೇಶ್, ರಾಚಯ್ಯ ಸ್ವಾಮಿ, ಶಂಕರ್ ಚಿದ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.