Home ಜಿಲ್ಲೆ ಡಾ ಶಿವಶಂಕರ ಟೋಕರೆ ಅವರಿಗೆ ರಾಜ್ಯ ಕಾಯಕಯೋಗಿ ಪ್ರಶಸ್ತಿ

ಡಾ ಶಿವಶಂಕರ ಟೋಕರೆ ಅವರಿಗೆ ರಾಜ್ಯ ಕಾಯಕಯೋಗಿ ಪ್ರಶಸ್ತಿ

ಬೀದರ:ಮೇ.೪:ಹೊಸಕೋಟೆ ತಾ.ಸೂಲಿಬೆಲೆ ಗ್ರಾಮದಲ್ಲಿ ಡಾ ಶಿವಶಂಕರ ಟೋಕರೆ ಅವರಿಗೆ ರಾಜ್ಯ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ರಾಜ್ಯದ ಮೂವತ್ಮೂರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಕಾಯಕಯೋಗಿ ಪ್ರಶಸ್ತಿ ಯನ್ನು ಪ್ರದಾನ ಮಾಡಿದ ಇಸ್ರೋ ಮಾಜಿ ಅಧ್ಯಕ್ಷರು ಹಾಗೂ ಕ.ರಾ.ವೈ.ಸಂ ಪರಿಷತ್ತಿನ ಮಹಾ ಪೋಷಕರಾದ ಡಾ ಕಿರಣ್ ಕುಮಾರ್ ಎ.ಎಸ್ ಅವರು ಮಾತನಾಡುತ್ತ ತಂತ್ರಜ್ಞಾನ ಕಾಲಘಟ್ಟದಲ್ಲಿ ಮೂಢನಂಬಿಕೆ, ಅಂಧಶ್ರದ್ದೆ, ಕಂದಾಚಾರ ತಾಂಡವವಾಡುತ್ತಿದೆ. ಇಂಥ ಸ್ಥಿತಿಯಲ್ಲಿ ವೈಜ್ಞಾನಿಕ ಪರಿಷತ್ತು ಜನಪರ ಕಾಳಜಿಯೊಂದಿಗೆ ವೈಜ್ಞಾನಿಕ ವೈಚಾರಿಕ ಭಾವನೆಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಯುತ್ತಿದೆ.ಇದು ಅತ್ಯಂತ ಮಹತ್ತರ ಕಾರ್ಯ. ವಿವಿಧ ಜಿಲ್ಲೆಯ ಸಾಧಕರನ್ನು ಅವ್ಹಾನಿಸಿ ಕಾಯಕಯೋಗಿ ಪ್ರಶಸ್ತಿ ನೀಡುತ್ತಿರುವ ದರಿಂದ ಸಾಧಕರ ಮನೋಬಲ ಹೆಚ್ಚಿಸಿದಂತಾಗಿದೆ ಎಂದರು.
ರಾಜ್ಯ ಒಕ್ಕಲಿಗರ ನಿರ್ದೇಕರಾದ ಡಾ. ಆಂಜಿನಪ್ಪ ಅವರು ಬಾಂಧವ್ಯ ಸೆಲೆ ಬಗ್ಗೆ ಮಾತನಾಡುತ್ತ ಇಂದು ಆರೋಗ್ಯ ಕಡೆ ಗಮನ ಹರಿಸುತ್ತಿರುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ದೇಹಕ್ಕೆ ಆಯುಷ್ಯ ಆಗುವುದು ಸಹಜ.ಅದರಲ್ಲೆ ತಲ್ಲೀನರಾಗಿರದೇ ಅನೇಕ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಸಂಘಟನೆ ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವೈಜ್ಞಾನಿಕ ಪರಿತ್ತಿನ ರಾಜ್ಯ ಅಧ್ಯಕ್ಷರಾದ ಡಾ ಹುಲಿಕಲ್ ನಟರಾಜ ಮಾತನಾಡಿ ಬೀದರ ಜಿಲ್ಲೆಯ ಬಡ ಐಟಿಐ ಕುಶಲಕರ್ಮಿಗಳ ಭವಿಷ್ಯದ ಹಿತದೃಷ್ಟಿಯಿಂದ ಸುಮಾರು ಹದಿನಾರು ಸಾವಿರ ಮಕ್ಕಳ ಕೈಗೆ ಕೆಲಸ ಕೊಟ್ಟ ಡಾ ಶಿವಶಂಕರ ಟೋಕರೆ, ಅಂತರರಾಷ್ಟಿçÃಯ ಮಟ್ಟ÷್ದ ಜನಪದ ಗಾಯಕಿ ಸವಿತಕ್ಕ, ಮೊದಲಾದವರ ಸೇವೆ ಅವಿಸ್ಮರಣೀಯ. ಅವರಿಗಿಂದು ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ವೇದಿಕೆ ಮೇಲೆ ವೈಜ್ಞಾನಿಕ ಪರಿಷತ್ತು ರಾಜ್ಯ ಗೌರವ ಅಧ್ಯಕ್ಷರಾದ ದಾನಿ ಬಾಬುರಾವ, ಜಿಲ್ಲಾಧ್ಯಕ್ಷರಾದ ಕಲಾಲ ದೇವಿ ಪ್ರಸಾದ, ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ತಾಲ್ಲುಕು ಕಸಾಪ ಅಧ್ಯಕ್ಷರಾದ ಟಿ ಎಮ್ ಪ್ರಾಚಾರ್ಯರಾದ ಡಾ ಬಸವರಾಜ ಬಲ್ಲೂರ ಹಾಜರಿದ್ದರು.