Home ಜಿಲ್ಲೆ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದೇ ನಿಜವಾದ ಧರ್ಮ:ಅಂಕಲಿಮಠಶ್ರೀ

ಸಮಾಜಕ್ಕೆ ಒಳ್ಳೆಯದನ್ನು ಮಾಡುವುದೇ ನಿಜವಾದ ಧರ್ಮ:ಅಂಕಲಿಮಠಶ್ರೀ

ಮುದ್ದೇಬಿಹಾಳ : ಸಮಾಜಕ್ಕೆ ಒಳಿತನ್ನು ಮಾಡುವದು ಮತ್ತು ಪ್ರಕೃತಿಯನ್ನು ಪ್ರೀತಿಸುವದೇ ಧರ್ಮದ ಮೂಲ ತತ್ವವಾಗಿದೆ ಸಮಾಜಕ್ಕೆ ಏನನ್ನಾದರೂ ಒಳ್ಳೆಯದನ್ನು ಮಾಡುವದೇ ಅತೀ ದೊಡ್ಡ ಧರ್ಮವಾಗಿದೆ ಎಂದು ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮಿಗಳು ನುಡಿದರು.
ಶುಕ್ರವಾರದಂದು ತಾಲೂಕಿನ ಗಂಗೂರ ಗ್ರಾಮದಲ್ಲಿ ದಸರಾ ನವರಾತ್ರಿ ಹಬ್ಬದ ನಿಮಿತ್ಯ ಏರ್ಪಡಿಸಲಾದ ಸಾಮೂಹಿಕ ವಿವಾಹ, ಶ್ರೀಗಳ ತುಲಾಭಾರ ಮತ್ತು ಧರ್ಮಸಭೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು ಧರ್ಮ ಅಂದರೆ ಒಬ್ಬರಿಗೊಬ್ಬರು ಒಳ್ಳೆಯದನ್ನು ಬಯಸುವದಾಗಿದೆ ಮಾನವ ಜನ್ಮದಲ್ಲಿ ಹುಟ್ಟಿದ ನಾವುಗಳು ಅಸೂಹೆ ಮತ್ಸರವನ್ನು ಬಿಟ್ಟು ಲೇಸನ್ನು ಬಯಸಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಬಸವಾದಿ ಶಿವಶರಣರು ಹೇಳಿದ ಜೀವನಸಾರ ವಚನಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಮರಸ್ಯದ ಜೀವನ ನಡೆಸಬೇಕು ಅದೇ ನಿಜವಾದ ಧರ್ಮವಾಗಿದೆ ಮಾನವರನ್ನು ಮಾನವರಂತೆ ಕಾಣಬೇಕು ಅವರ ಆತ್ಮರಂಗದಲ್ಲಿ ಪರಶಿವನು ನೆಲಸಿಹ ಎಂಬ ಸತ್ಯ ಅರಿಯಬೇಕೆಂದ ಅವರು ನೂತನ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧುವರಿಗೆ ಅವಿಭಕ್ತ ಕುಟುಂಬ ಮತ್ತು ಅತ್ತೆ ಮಾನವರ ಸೇವೆಯ ಜೊತೆಗೆ ಮಾದರಿಯ ದಾಂಪತ್ಯ ಜೀವನ ಹೇಗೆ ನಡೆಸಬೇಕೆಂದು ತಿಳಿಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಂಚಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ವೈ. ಹೆಚ್ ವಿಜಯಕರ ಮಾತನಾಡಿ ಗಂಗೂರ ಗ್ರಾಮದಲ್ಲಿ ಪ್ರತಿವರ್ಷವೂ ದಸರಾ ಹಬ್ಬದ ನಿಮಿತ್ತ ಸಾಮೂಹಿಕ ವಿವಾಹಗಳನ್ನು ನಾಗಪ್ಪ ಲಕ್ಕನವರ ಮಾಡಿಕೊಂಡು ಬರುತ್ತಿರುವುದು ಇದೊಂದು ಮಾದರಿಯ ಕಾರ್ಯವಾಗಿದೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ತುರವಿಹಾಳ ಶ್ರೀ ಅಮರಗುಂಡ ಶಿವಾಚಾರ್ಯ ಹಾಗೂ ಮುದ್ದೇಬಿಹಾಳ ಹೊಸಮಠದ ಶ್ರೀ ಅಮರೇಶ್ವರ ದೇವರು ಆಶೀರ್ವಚನ ನೀಡಿದರು.
ವಿಜಯಪುರ ಮಹಿಳಾ ಪಿಯು ಕಾಲೇಜ ಉಪನ್ಯಾಸಕ ಉಮರ್ ಶರೀಫ್ ಕುಂಟೋಜಿ ಉಪನ್ಯಾಸ ನೀಡಿದರು.
ಈ ಸಮಯದಲ್ಲಿ ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮಿಗಳ ತುಲಾಭಾರ ಸೇವೆಯನ್ನು ಶಿವಶಂಕರಗೌಡ ಹಿರೇಗೌಡರ ಪರಿವಾರದಿಂದ ಅವರ ಪುತ್ರ ವಿನೋದ ಹಿರೇಗೌಡರ ದಂಪತಿಗಳು ನೆರವೇರಿಸಿದರು.
ನಂತರ ಸಮೀತಿಯ ಪದಾಧಿಕಾರಿಗಳಿಂದ 501 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಇದೇ ಸಮಯದಲ್ಲಿ ನಾಲ್ಕು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ, ನೀಲಕಂಠರಾವ್ ನಾಡಗೌಡ, ಎನ್.ಎಸ್. ದೇಶಮುಖ, ಪ್ರಜ್ವಲ್ ಪಾಟೀಲ್, ಗುರು ತಾರನಾಳ, ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ, ಸೋಮನಗೌಡ ಪಾಟೀಲ(ನಡಹಳ್ಳಿ), ಲಕ್ಷ್ಮಣ ಬಿಜ್ಜೂರ, ಮಹೇಶ ಪಾಟೀಲ್, ಮಾರುತಿ ಗುರವ, ಶಿವಪ್ಪಗೌಡ ತಾತರಡ್ಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಗಣ್ಯರು ಭಾಗವಹಿಸಿದ್ದರು.
ಪಂಚಾಕ್ಷರಿ ಗವಾಯಿಗಳು ಪ್ರಾರ್ಥಿಸಿದರು, ಕಾರ್ಯಕ್ರಮದ ರೂವಾರಿ ನಾಗಪ್ಪ ಲಕ್ಕನವರ ಸ್ವಾಗತಿಸಿದರು. ಎಲ್.ಬಿ. ಗುಬಚಿ ನಿರೂಪಿಸಿ ವಂದಿಸಿದರು