
ಕಲಬುರಗಿ,ಮೇ.3-ಗ್ಯಾಸ್ ಏಜೆನ್ಸಿಗಳು ಮಾಡುತ್ತಿರುವ ಅಕ್ರಮ ಅವ್ಯವಹಾರಗಳನ್ನು ತಡೆಗಟ್ಟಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಂಬ ಸೇನಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ಮಾಡುತ್ತಿರುವ ಅಕ್ರಮಗಳು ಮತ್ತು ಮೋಸದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು.
ಜಿಲ್ಲೆಯಲ್ಲಿನ ಅನೇಕ ಗ್ಯಾಸ್ ಏಜೆನ್ಸಿಗಳು ನಿಯಮಗಳನ್ನು ಉಲ್ಲಂಘಿಸಿ ಹೆಚ್ಚುವರಿ ಹಣ ವಸೂಲಿ, ತೂಕದಲ್ಲಿ ಮೋಸ ಮಾಡುತ್ತಿವೆ. ಗ್ರಾಹಕರಿಗೆ ಸಿಲಿಂಡರ್ ನೀಡುವಾಗ ಅದರ ತೂಕವನ್ನು ಪರಿಶೀಲಿಸದೆ, ಕಡಿಮೆ ಅನಿಲ (ಗ್ಯಾಸ್) ಇರುವ ಸಿಲಿಂಡರ್‍ಗಳನ್ನು ನೀಡಲಾಗುತ್ತಿದೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಶರಣಗೌಡ ಪಾಟೀಲ್ ನಿಂಬಾಳ್ ಮನವಿ ಮಾಡಿದರು.






















