
ಕಲಬುರಗಿ,ಅ.7-ಮದರ್ ತೆರಸಾ ಚಾರಿಟೇಬಲ್ ಟ್ರಸ್ಟಿನಡಿ ಇರುವ ಶಾಲಾ ಕಾಲೇಜಿನ ಶಿಕ್ಷಕರು ಉಪನ್ಯಾಸಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಗಾರ ಸಾರ್ವತ್ರಿಕ ಮಾನವೀಯ ಮೌಲ್ಯಗಳು ಎಂಬ ವಿಷಯದ ಮೇಲೆ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಮರೇಶ ಪಾಟೀಲ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿಷಯದ ಕುರಿತು ಸುಧೀರ್ಘವಾಗಿ ವಿಷಯ ಪ್ರಸ್ತುತ ಪಡಿಸಿದರು.
ಸತ್ಯ – ಯಾವಾಗಲೂ ಸತ್ಯವನ್ನು ಮಾತನಾಡುವುದು ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವುದು, ಪ್ರೀತಿ – ಇತರರ ಬಗ್ಗೆ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆಯನ್ನು ಹೊಂದಿರುವುದು, ಶಾಂತಿ -ಮನಸ್ಸಿನಲ್ಲಿ ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದು, ಅಹಿಂಸೆ – ಯಾರಿಗೂ ದೈಹಿಕ ಅಥವಾ ಮಾನಸಿಕ ಹಾನಿ ಮಾಡದಿರುವುದು, ಪ್ರಾಮಾಣಿಕತೆ – ಮೋಸ ಮಾಡದೆ ನಿಷ್ಠೆಯಿಂದ ನಡೆದುಕೊಳ್ಳುವುದು, ಗೌರವ – ಹಿರಿಯರು, ಕಿರಿಯರು, ಶಿಕ್ಷಕರು, ಪೆÇೀಷಕರು ಮತ್ತು ಎಲ್ಲರನ್ನು ಗೌರವಿಸುವುದು, ಕರುಣೆ – ಕಷ್ಟದಲ್ಲಿರುವವರ ಬಗ್ಗೆ ಅನುಕಂಪ ಮತ್ತು ಸಹಾಯದ ಮನೋಭಾವ ಹೊಂದಿರುವುದು, ಜವಾಬ್ದಾರಿ – ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವುದು, ಸಹಕಾರ – ಪರಸ್ಪರ ಸಹಾಯ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುವುದು, ಸಮಾನತೆ – ಜಾತಿ, ಧರ್ಮ, ಭಾಷೆ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಭೇದಭಾವ ಮಾಡದಿರುವುದು, ನ್ಯಾಯ – ಎಲ್ಲರಿಗೂ ನ್ಯಾಯಯುತವಾಗಿ ಮತ್ತು ಸಮಾನವಾಗಿ ವರ್ತಿಸುವುದು, ಕೃತಜ್ಞತೆ – ನಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಂಡು ಕೃತಜ್ಞರಾಗಿರುವುದು-ಈ ಎಲ್ಲಾ ಮಾನವೀಯ ಮೌಲ್ಯಗಳು ಎಷ್ಟು ಮಹತ್ವ ಎಂದರೆ ನಮ್ಮ ವ್ಯಕ್ತಿತ್ವ ಬೆಳವಣಿಗೆ ಯಾದರೆ ದೇಶ ಒಳ್ಳೆದಾಗುತ್ತದೆ ಮೊದಲು ನಮ್ಮನ್ನು ನಾವು ಅರ್ಥೈಯಿಸಿಕೊಳ್ಳಬೇಕು ಆಗ ಬೆರೆಯವರನ್ನು ಆರ್ಥೈಯಿಸಿಕೊಳ್ಳಲು ಸುಲಭವಾಗುತ್ತದೆ. ಈ ಮಾನವೀಯ ಮೌಲ್ಯಗಳು ಶಿಕ್ಷಕರು ಮಕ್ಕಳು ಹಾಗೂ ಕುಟುಂಬ ಸಂಬಂಧಪಟ್ಟಿದ್ದು ಎಂದು ಹೇಳಿಕೊಟ್ಟರು.
ಶಿಕ್ಷಕರು ಒಂದು ಮಗುವಿಗೆ ಮೌಲ್ಯಗಳನ್ನು ಹೇಗೆ ಬೆಳೆಸಬೇಕು ಹಾಗೂ ಎಲ್ಲ ಮಕ್ಕಳಿಗೆ ಆದ್ಯತೆ ಕೊಟ್ಟು ಮಗುವಿನ ಮಾನಸಿಕ ಭೌದ್ಧಿಕ, ವೈಚಾರಿಕ, ಶಾರೀರಿಕ ಸಾಮಥ್ರ್ಯಕ್ಕನುಗುಣವಾಗಿ ಮಗುವಿನ ಬೆಳವಣಿಗೆ ಮಾಡಬೇಕು ಯಾವುದೇ ಕಾರಣಕ್ಕೂ ಒಂದು ಮಗುವಿಗೂ ಹಾಗೂ ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡಬಾರದು ಈ ರೀತಿ ಮಾಡಿದರೆ ಮಗು ಶಿಕ್ಷಣ ಹಾಗೂ ಶಿಕ್ಷಕರಲ್ಲಿ ಆಸಕ್ತಿ ತೋರಿಸುವುದಿಲ್ಲ.
ಸಾರ್ವತ್ರಿಕ ಮಾನವೀಯ ಮೌಲ್ಯದ ಮುಖ್ಯ ಅಂಶಗಳಾದ ಮೂಲಭೂತ ಆಕಾಂಕ್ಷೆ ಮತ್ತು ಅದರ ಈಡೇರಿಕೆ, ಸಮಗ್ರ ಅಭಿವೃದ್ಧಿ, ಶಿಕ್ಷಣದ ಪಾತ್ರ, ಜೀವನದ ಆದ್ಯತೆ, ಸರಿಯಾದ ತಿಳವಳಿಕೆ, ಸಂಬಂಧ, ಮತ್ತು ಭೌತಿಕ
ಸೌಲಭ್ಯಗಳ ಕುರಿತು ಈ ಶಿಕ್ಷಣ ಮತ್ತು ಸಂಸ್ಕಾರದ ಮೂಲಕ ತಿಳಿಯಲು ವ್ಯಕ್ತಿಗೆ ಸಹಾಯವಾಗುತ್ತದೆ. ಈಗಿನ ಭೌತಿಕಸೌಕರ್ಯಗಳಾದ ಟಿ.ವಿ, ಕಾರು, ಬಂಗಲೆ, ಇತ್ಯಾದಿ ಯಾವುದರಲ್ಲಿ ಸುಖವಿಲ್ಲ ಒಳ್ಳೆಯ ಸಂಬಂಧವನ್ನು ಕಾಪಾಡಿಕೊಂಡು ಹೋಗಬೇಕು ಹಾಗೂ ಇದರಲ್ಲಿಯೇ ಸಂತೋಷ ಮತ್ತು ಸಮೃಧ್ಧಿಯನ್ನು ಕಾಣಬಹುದಾಗಿದೆ ಎಂದರು.
ಮೊಟ್ಟ ಮೊದಲಿಗೆ ಮನಿಷಾ ಜೋಶಿ ಯವರ ಪ್ರಾರ್ಥನೆಯೊಂದಿಗೆ ಕಾರ್ಯಗಾರ ಪ್ರಾರಂಭಿಸಲಾಯಿತು.
ಈ ಕಾರ್ಯಗಾರದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ, ಮುಖ್ಯಗುರುಗಳಾದ ನಾಗೇಂದ್ರ ಬಡೀಗೆರ, ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೀತಿ ಪಾಟೀಲ್, ಶಿಕ್ಷಕರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.























