Home ಜಿಲ್ಲೆ ಕವರ್ಡ್ ಕೇಬಲ್ ಕಾಮಗಾರಿಗೆ ಚಾಲನೆ:ನಿರಂತರ ಸುರಕ್ಷಿತ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆದ್ಯತೆ: ಶಾಸಕ ಲಕ್ಷ್ಮಣ ಸವದಿ

ಕವರ್ಡ್ ಕೇಬಲ್ ಕಾಮಗಾರಿಗೆ ಚಾಲನೆ:ನಿರಂತರ ಸುರಕ್ಷಿತ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆದ್ಯತೆ: ಶಾಸಕ ಲಕ್ಷ್ಮಣ ಸವದಿ

ಅಥಣಿ :ಮೇ.24: ನಿರಂತರ ಸುರಕ್ಷಿತ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಅಥಣಿ ಪಟ್ಟಣದ ವ್ಯಾಪ್ತಿಯಲ್ಲಿ ಹೆಸ್ಕಾಂ ಉಪ ವಿಭಾಗದ ವತಿಯಿಂದ ಪಟ್ಟಣದ ಜನದಟ್ಟಣೆ ಪ್ರದೇಶಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕವರ್ಡ್ ಕೇಬಲ್ ಕಂಡಕ್ಟರ್ ಮತ್ತು ಸ್ಪನ್ ಪೆÇೀಲ್ ಡಿಟಿಸಿ ಅಳವಡಿಸುವ ಕಾಮಗಾರಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು.
ಈ ವೇಳೆ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡಿ ಅಥಣಿ ಪಟ್ಟಣದ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ವ್ಯಾಪ್ತಿಯಲ್ಲಿ ಪದೇಪದೇ ವಿದ್ಯುತ್ ಸಮಸ್ಯೆಯಾಗುತ್ತಿತ್ತು. ಹಳೆಯ ತಂತಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.
ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಅಡಚಣೆ, ಸೋರಿಕೆ ಹಾಗೂ ಅಪಘಾತ ನಿಯಂತ್ರಿಸಲು ಕೇಬಲ್ ಅಳವಡಿಕೆ ಸಹಕಾರಿಯಾಗಿದೆ. ಪಟ್ಟಣದೆಲ್ಲಡೆ ಸುಮಾರು. 4.33 ಕೋಟಿ ರೂ.ಗಳ ವೆಚ್ಚದಲ್ಲಿ ಕೇಬಲ್ ಬದಲಾಯಿಸಲಾಗುತ್ತಿದೆ. ಸರ್ಕಾರದ ಹಲವು ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಈಗ ಕವರ್ಡ್ ಕೇಬಲ್ ಅಳವಡಿಕೆಯಿಂದ ವಿದ್ಯುತ್ ನಷ್ಟ ಕಡಿಮೆಯಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಮಳೆಗಾಲದ ಸಮಯದಲ್ಲಿ ತಂತಿ ತುಂಡಾಗಿ ಬೀಳುವುದು. ಶಾರ್ಟ್ ಸಕ್ರ್ಯೂಟ್ ಆಗುವ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು. ಪದೇ ಪದೇ ವಿದ್ಯುತ್ ವ್ಯತ್ಯಯ ವಾಗುವುದಿಲ್ಲ ಎಂದು ಹೇಳಿದರು.
ಈ ಕವರ್ಡ್ ಕೇಬಲ್ ಅಳವಡಿಸುವ ಕಾಮಗಾರಿಯನ್ನು ಎಲ್ಲ ಗುತ್ತಿಗೆದಾರರ ಸಂಘದ ಸದಸ್ಯರು ಸೇರಿ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶೀವಲೀಲಾ ಬುಟಾಳಿ, ಉಪಾದ್ಯಕ್ಷ ಭುವನೇಶ್ವರ ಯಕ್ಕಂಚಿ. ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಪಟ್ಟಣದ ವೈದ್ಯ ಡಾ. ಮಲ್ಲಿಕಾರ್ಜುನ ಹಂಜಿ. ಪುರಸಭೆ ಸದಸ್ಯರಾದ ರಾಜಶೇಖರ ಗುಡೊಡಗಿ, ಸಂತೋಷ ಸಾವಡಕರ. ಸೈಯದ್ ಅಮಿನ್ ಗದ್ಯಾಳ, ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ, ಬಸವರಾಜ ನಾಯಿಕ. ಮುಖಂಡರಾದ ಮುರಿಗೆಪ್ಪ ತೊದಲಬಾಗಿ. ಶಿವಶಂಕರ ಗೆಜ್ಜಿ. ಪ್ರಕಾಶ ಮಹಾಜನ್. ರಾಜು ಬುಲಬುಲೆ, ಬಾಬು ಖೇಮಲಾಪೂರ, ಅಬ್ದುಲಅಜೀಜ ಮುಲ್ಲಾ. ಆನಂದ ಟೋನಪೆ, ರಾಜು ಆಲಬಾಳ, ಆಸೀಫ್ ತಾಂಬೋಳಿ. ಶ್ರೀನಿವಾಸ ಪಟ್ಟಣ. ಫೈಸಲ್ ಮೊಮೀನ್. ಸುಶೀಲಕುಮಾರ ಪತ್ತಾರ. ಬೆಳಗಾವಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸದಸ್ಯ ಹಾಗೂ ಗುತ್ತಿಗೆದಾರ ಅಮೀರ ಖತೀಬ, ಸಂಗಮೇಶ ನಾರಗೊಂಡ, ಶಿವಲಿಂಗ ಕೊಕಳೆ, ದ್ವಾರಕೀಶ ಜಾಲಿಹಾಳ, ಹೆಸ್ಕಾಂ ಇಲಾಖೆಯ, ಜಿ ವಿ ಸಂಪನ್ನವರ, ಶಬ್ಬಿರ್ ಪಾರ್ಥನಹಳ್ಳಿ, ಮಹಾಂತೇಶ ಅಂಬೋಲಿ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.