Home ಜಿಲ್ಲೆ ಬೆಂಗಳೂರು ಹೆಚ್‌ಡಿಕೆ ವಿರುದ್ಧ ಕೈ ನಾಯಕರ ಪ್ರತಿಭಟನೆ

ಹೆಚ್‌ಡಿಕೆ ವಿರುದ್ಧ ಕೈ ನಾಯಕರ ಪ್ರತಿಭಟನೆ

ಬೆಂಗಳೂರು, ಅ. ೧೭- ಬ್ಲಾಕ್ ಮೇಲ್ ತಂತ್ರ, ಬೆದರಿಕೆ ತಂತ್ರವನ್ನು ಅನುಸರಿಸಿ ರಾಜಕೀಯ ಲಾಭ ಪಡೆಯುತ್ತಿರುವ ಸಮಯ ಸಾಧಕ ರಾಜಕಾರಣಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಎಂದು ಇಡೀ ದೇಶಕ್ಕೆ ತಿಳಿದಿದೆ ಎಚ್ಡಿಕೆ ಹೇಳಿಕೆಯನ್ನು ಖಂಡಿಸಿ ಇಂದು ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡಿದರು.


ರಾಹುಲ್ ಗಾಂಧಿ ರವರ ಹೆಸರು ಹೇಳುವ ಅರ್ಹತೆ ಕುಮಾರಸ್ವಾಮಿ ನಿಮಗೆ ಇಲ್ಲ ನೀವೊಬ್ಬ ಸಮಯ ಸಾಧಕ ರಾಜಕಾರಣಿ ಹಣಕ್ಕಾಗಿ ಅಧಿಕಾರಕ್ಕಾಗಿ ಯಾವ ಕೀಳು ಮಟ್ಟಕ್ಕೂ ಧುಮುಕುವ ವ್ಯಕ್ತಿ ಎಂದರೆ ಕುಮಾರಸ್ವಾಮಿ ಎಂದು ಕರ್ನಾಟಕದ ನಾಡಿನ ಜನತೆಗೆ ತಿಳಿದಿದೆ ನಿಮ್ಮಂತಹ ನೀಚತನದ ವ್ಯಕ್ತಿಗಳು ರಾಜಕೀಯದಲ್ಲಿ ಇರುವುದು ಅಪಾಯಕಾರಿ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಟೀಕಿಸುವ ನೀವು ನಿಮ್ಮ ಯೋಗ್ಯತೆ ಅರ್ಹತೆ ಏನೆಂಬುದನ್ನ ಮೊದಲು ಅರ್ಥೈಸಿಕೊಳ್ಳಿ ಅಧಿಕಾರಕ್ಕೆ ಹೋಗಿ ಬಿಜೆಪಿ ನಾಯಕರ ಕಾಲು ಹಿಡಿಯುವ ನೀವು ಕೇವಲ ಕರ್ನಾಟಕದಲ್ಲಿ ತನ್ನ ಪಕ್ಷ ಹಾಗೂ ತನ್ನ ಕುಟುಂಬದ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಒಬ್ಬ ಸ್ವಾರ್ಥ ರಾಜಕಾರಣಿ ಯಾರಾದರೂ ಇದ್ದರೆ ಅದು ಎಚ್.ಡಿ.ಕುಮಾರಸ್ವಾಮಿ ಎಂದಿದ್ದಾರೆ.


ಸ್ಪ್ರಿಂಗ್ ಆಪರೇಷನ್ ಹೆಸರಿನಲ್ಲಿ ಈಗಾಗಲೇ ತಮ್ಮ ರಾಜಕೀಯ ಜೀವನ ಬೆತ್ತಲೆ ಆಗಿರುವುದು ಬಹಿರಂಗವಾಗಿದೆ ಮೊದಲು ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರ ಕ್ಷಮೆ ಕೋರಿ ರಾಜಕೀಯದಿಂದ ನಿವೃತ್ತರಾಗಿ ಅಲ್ಪ ಸ್ವಲ್ಪ ಗೌರವವನ್ನು ಉಳಿಸಿಕೊಂಡು ಬದುಕಿ ಎಂದು ಪ್ರತಿಭಟನೆ ಮೂಲಕ ಹೆಚ್.ಡಿ. ಕುಮಾರಸ್ವಾಮಿಗೆ ಎಚ್ಚರಿಕೆಯನ್ನು ನೀಡಲಾಯಿತು.


ಈ ವಿನೂತನ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ,ಜಿ. ಪ್ರಕಾಶ್ , ಪುಟ್ಟರಾಜು ,ಲಕ್ಷ್ಮೀನಾರಾಯಣ, ಮುರಳಿ, ಕಿಶೋರ್, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಭಾಗವಹಿಸಿದ್ದರು.