Home ಜಿಲ್ಲೆ ಬೆಂಗಳೂರು ವರ್ಲ್ಡ್ ಸ್ಕೇಟ್ ಭಾರತದಿಂದ ಅರೂಷ್ ಕೀಪರ್

ವರ್ಲ್ಡ್ ಸ್ಕೇಟ್ ಭಾರತದಿಂದ ಅರೂಷ್ ಕೀಪರ್

ಕೆಆರ್ ಪುರ,ಅ.೧೭- ದಕ್ಷಿಣ ಅಮೇರಿಕಾದ ಪರಗ್ವೆ ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕೇಟ್ ಗೇಮ್ಸ್ ನಲ್ಲಿ ಭಾರತ ತಂಡದ ಪರವಾಗಿ ರಾಜ್ಯದ ಪರವಾಗಿ ಅರೂಷ್ ಕುಶಾಂತ್ ಗೋಲ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.


ಬೆಂಗಳೂರು ಗ್ರಾಮಾಂತರ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಸಹಕಾರದಿಂದ ಪಟೇಲ್ ರಾಮಯ್ಯ ಮತ್ತು ಕೆಂಪೇಗೌಡ ಸ್ಕೇಟಿಂಗ್ ರಿಂಗ್ ನಲ್ಲಿ ತರಬೇತಿಯನ್ನು ಪಡೆದು ಭಾರತ ತಂಡದಲ್ಲಿ ಗೋಲ್ ಕೀಪರ್ ಆಗಿ ಆಯ್ಕೆಯಾಗಿದ್ದು ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತ ಪಡಿಸಿದರು.


ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೊಲರ್ ಸ್ಕೇಟಿಂಗ್ ಅಸೋಸಿ ಯೇಷನ್ ಚೇರ್ಮನ್ ಹಾಗೂ ಶಾಸಕರಾದ ಶರತ್ ಬಚ್ಚೇಗೌಡ ಮಾತನಾಡಿ, ಭಾರತ ತಂಡಕ್ಕೆ ಹೊಸಕೋಟೆ ಆರೂಷ್ ಕುಶಾಂತ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು. ಭಾರತ ಪರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪದಕ ಗಳಿಸಿ ಬರುವಂತೆ ಶುಭ ಹಾರೈಸಿದರು.


ಕರ್ನಾಟಕ ರಾಜ್ಯ ರೊಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಂಧುದರ್ ಸೀತಾರಾಂ ಮಾತನಾಡಿ, ಕರ್ನಾಟದಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಅಸೋಸಿಯೇಷನ್ ವತಿಯಿಂದ ಹೆಚ್ವಿನ ಶ್ರಮ ವಹಿಸುತ್ತಿದ್ದು ಕರ್ನಾಟಕದಿಂದ ಭಾರತ ತಂಡಕ್ಕೆ ಆಯ್ಕೆಯಾಗಿರುವ ಗೋಲ್ ಕೀಪರ್ ಅರೂಷ್ ಕುಶಾಂತ್ ರವರ ಕ್ರೀಡಾ ಬದುಕು ಉಜ್ವಲ ವಾಗಿರಲಿ ಎಂದರು.


ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ರೊಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಮೇಶ್.ಎ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗೌಡ, ಕೆಂಪೇಗೌಡ ಸ್ಕೇಟಿಂಗ್ ರಿಂಗ್ ಕಾರ್ಯದರ್ಶಿ ಕುಶಾಂತ್ ಗೌಡ ಸೇರಿದಂತೆ ಪೋಷಕರು ಅಸೋಸಿಯೇಷನ್ ಪಧಾದಿಕಾರಿಗಳು ಶುಭಹಾರೈಸಿದರು.